ಸ್ಕರಿಯ ಅವರಿಗೆ ಎಎಸ್‌ಐ ಹುದ್ದೆಗೆ ಪದೋನ್ನತಿ; ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ

ಪುತ್ತೂರು: ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಕರಿಯ ಅವರು ಎಎಸ್‌ಐ ಆಗಿ ಪದೋನ್ನತಿ ಹೊಂದಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಕಳೆದ 29 ವರ್ಷಗಳಿಂದ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಸ್ಕರಿಯ ಅವರು, ಈ ಹಿಂದೆ 2005 ರಿಂದ 2011 ರ ವರೆಗೆ ಸುಳ್ಯ ಪೊಲೀಸ್‌ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸಿದ್ದರು.

ಬಳಿಕ ಬಡ್ತಿ ಹಾಗೂ ವರ್ಗಾವಣೆಯೊಂದಿಗೆ ಮತ್ತೆ ಸುಳ್ಯ ಠಾಣೆಗೆ ಮರಳಿದ್ದರು.ಮಂಗಳೂರು ಪೂರ್ವ ಪೊಲೀಸ್‌ ಠಾಣೆ, ಪುತ್ತೂರು ಸಂಚಾರ ಠಾಣೆ, ಮಂಗಳೂರಿನ ಜಿಲ್ಲಾ ಅಪರಾಧ ವಿಭಾಗ (DCB) ಹಾಗೂ ಪುತ್ತೂರು ನಗರ ಠಾಣೆ ಸೇರಿದಂತೆ ಹಲವು ಪ್ರಮುಖ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಇವರಿಗಿದೆ. ಇತ್ತೀಚೆಗೆ ಪುತ್ತೂರು ನಗರ ಠಾಣೆಯಿಂದ ಸುಳ್ಯಕ್ಕೆ ವರ್ಗಾವಣೆಗೊಂಡು ಕಾರ್ಯನಿರ್ವಹಿಸುತ್ತಿದ್ದ ಅವರು ಇದೀಗ ಪದೋನ್ನತಿ ಹೊಂದಿ ಸುಬ್ರಹ್ಮಣ್ಯಕ್ಕೆ ವರ್ಗಾವಣೆಯಾಗಿದ್ದಾರೆ. ಸ್ಕರಿಯ ಅವರು ಕಡಬ ತಾಲೂಕಿನ ಬಲ್ಯ ಗ್ರಾಮದ ಮಾತ್ರಡಿ ಮನೆಯ ದಿ. ಎಂ.ಜಿ. ಅಬ್ರಹಾಂ ಹಾಗೂ ದಿ. ಸಾರಮ್ಮ ಅಬ್ರಹಾಂ ದಂಪತಿಯ ಪುತ್ರರಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!