ಮಂಜೇಶ್ವರ : ಸಿಪಿಐಎಂ ಮಂಜೇಶ್ವರ ಲೋಕಲ್ ಕಮಿಟಿಯ ನೇತೃತ್ವದಲ್ಲಿ ಹೊಸಬೆಟ್ಟು ಗ್ರಾಮ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ನಡೆಯಿತು.ಪ್ರಶಾಂತ್ ಕನಿಲರವರ ಅಧ್ಯಕ್ಷತೆಯಲ್ಲಿ ನಡೆದ ಧರಣಿಯನ್ನು ಕಾಸರಗೋಡು ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ ಆರ್ ಜಯಾನಂದ ಉದ್ಘಾಟಿಸಿದರು.

ಕೇರಳ ಸರಕಾರವು ಕ್ಷೇಮ ಪೆನ್ಸ್‌ನ್ ವಿತರಣೆಯನ್ನು ರಾಷ್ಟ್ರೀಕೃತ ಬ್ಯಾಂಕಿನ ಮೂಲಕ ವಿತರಿಸುವ ನಿರ್ಧಾರ ಹಿಂತೆಗೆಯಬೇಕು, ಕ್ಷೇಮ ಪೆನ್ಸನ್ ಬುಡಮೇಲುಗೊಳಿಸುವ ನಿಲುವಿನಿಂದ ಹಿಂದಕ್ಕೆ ಸರಿಯಬೇಕು, ಐಕ್ಯ ರಂಗ ಪ್ರಕಟಣೆಯಲ್ಲಿ ಘೋಷಿಸಿದ ರೂ 3000/- ಪೆಸ್ಟನ್ ಕೂಡಲೇ ನೀಡಬೇಕು. ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಧರಣಿ ಹಮ್ಮಿಕೊಳ್ಳಲಾಗಿತ್ತು.
ಕರುಣಾಕರ ಶೆಟ್ಟಿ, ಅಶ್ರಫ್ ಕೂಜತ್ತೂರು, ಪ್ರೇಮ ಮೊದಲಾದವರು ನೇತೃತ್ವ ನೀಡಿದರು. ಕಮಲಾಕ್ಷ ಕನಿಲ ಸ್ವಾಗತಿಸಿ ಶ್ರೀಧರ ಕುಂಜತ್ತೂರು ವಂದಿಸಿದರು.


