ಮಂಗಳೂರು:ಕರ್ನಾಟಕ ಸರ್ಕಾರದ ‘ಬಿಯಾಂಡ್ ಬೆಂಗಳೂರು’ ಮಿಷನ್ ಹಾಗೂ LEAP ಉಪಕ್ರಮದಡಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ‘ಕೆ-ಕಾಂಬಿನೇಟರ್’ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು TiE ಮಂಗಳೂರು ಅಧ್ಯಕ್ಷ ಶ್ಯಾಮ್ ಪ್ರಸಾದ್ ಹೆಬ್ಬಾರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಕರ್ನಾಟಕದ ಮೊದಲ ಕೆ-ಕಾಂಬಿನೇಟರ್ ಕಾರ್ಯಕ್ರಮವನ್ನು ಮುನ್ನಡೆಸಲು TiE ಮಂಗಳೂರು ಆಯ್ಕೆಯಾಗಿದ್ದು, ಉಡುಪಿ–ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು .
ಪ್ರತಿ ಕೋಹಾರ್ಟ್‌ಗೆ 4ರಿಂದ 6 ಸ್ಟಾರ್ಟ್‌ಅಪ್‌ಗಳನ್ನು ಆಯ್ಕೆ ಮಾಡಿ, 16 ವಾರಗಳ ಕಾಲ ಬೂಟ್‌ಕ್ಯಾಂಪ್, ಮಾಸ್ಟರ್‌ಕ್ಲಾಸ್, ಮಾರ್ಗದರ್ಶನ, ಮಾರುಕಟ್ಟೆ ಸಂಪರ್ಕ ಹಾಗೂ ಹೂಡಿಕೆ ಸಿದ್ಧತೆ ಕುರಿತು ತರಬೇತಿ ನೀಡಲಾಗುತ್ತದೆ ಎಂದರು .

ಪ್ರತಿ ಕೋಹಾರ್ಟ್‌ನಿಂದ ಎರಡು ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ಶೂನ್ಯ ಈಕ್ವಿಟಿಯಲ್ಲಿ ತಲಾ ₹10 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ. ಐದು ವರ್ಷಗಳಲ್ಲಿ ಕಾರ್ಯಕ್ರಮಕ್ಕೆ ಒಟ್ಟು ₹9.26 ಕೋಟಿ ಅನುದಾನ ಮಂಜೂರಾಗಿದ್ದು, ಮೊದಲ ಕಂತಿನ ₹1.89 ಕೋಟಿ ಬಿಡುಗಡೆಯಾಗಿದೆ ಎಂದರು .
ಸುದ್ದಿಗೋಷ್ಠಿಯಲ್ಲಿ TiE ಮಂಗಳೂರಿನ ಉಪಾಧ್ಯಕ್ಷ ಸುಯೋಗ್ ಶೆಟ್ಟಿ, ಪ್ರಮುಖ ಸದಸ್ಯರಾದ ರೋಹಿತ್ ಭಟ್ ಹಾಗೂ ಅತುಲ್ ಉಡುಪಿ ಉಪಸ್ಥಿತರಿದ್ದರು.


