ಮಂಗಳೂರು: ಕೇರಳದ ಪೂನೂರ್ ಜಾಮಿಅ ಮದೀನತುನ್ನೂರ್ನ ಹಳೆ ವಿದ್ಯಾರ್ಥಿ ಅಹ್ಮದ್ ರಾಶಿದ್ ನೂರಾನಿ ಅವರು ಸೈಕಾಲಜಿ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಮಧ್ಯಪ್ರದೇಶದ ಅಮರ್ಕಂಟಕ್ನ ಇಂದಿರಾ ಗಾಂಧಿ ನ್ಯಾಷನಲ್ ಟ್ರೈಬಲ್ ಯೂನಿವರ್ಸಿಟಿಯಲ್ಲಿ (IGNTU) ‘ಎಪಿಸ್ಟೆಮಿಕ್ ಕಾಗ್ನಿಷನ್ ಇಂಟರ್ವೆನ್ಶನ್ನ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ಸಾಮರ್ಥ್ಯದ ಮೇಲಿನ ಅದರ ಪರಿಣಾಮ’ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿದ್ದರು. ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಲಲಿತ್ ಕುಮಾರ್ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಪೂರ್ಣಗೊಳಿಸಿದ ಅವರಿಗೆ ‘ಡಾಕ್ಟರ್ ಆಫ್ ಫಿಲಾಸಫಿ’ (Ph.D.) ಪದವಿ ಪ್ರದಾನ ಮಾಡಲಾಗಿದೆ.

ಅಹ್ಮದ್ ರಾಶಿದ್ ನೂರಾನಿ ಅವರು ಜಾಮಿಅ ಮದೀನತುನ್ನೂರ್ನಲ್ಲಿ ಏಳು ವರ್ಷಗಳ ಇಸ್ಲಾಮಿಕ್ ಶಿಕ್ಷಣ ಪೂರ್ಣಗೊಳಿಸಿ ‘ನೂರಾನಿ’ ಪದವಿ ಪಡೆದ ಬಳಿಕ ಇದೇ ವಿಶ್ವವಿದ್ಯಾನಿಲಯದಲ್ಲಿ ಅಪ್ಲೈಡ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.
ಕಾಸರಗೋಡಿನ ಕುಣಿಯ ಕಾಲೇಜಿನಲ್ಲಿ ಸೈಕಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು, ಪ್ರಸ್ತುತ ತಮಿಳುನಾಡಿನ ಚೆನ್ನೈನ ಕ್ರೆಸೆಂಟ್ ಯೂನಿವರ್ಸಿಟಿಯ ಮನಃಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರು UGC-NET ಹಾಗೂ ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್ ಪಡೆದಿದ್ದು, GATE ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 198ನೇ ರ್ಯಾಂಕ್ ಗಳಿಸಿದ್ದಾರೆ.



