ಮಂಜೇಶ್ವರ : ಚುನಾವಣಾ ಸಂದರ್ಭದಲ್ಲಿ ನೀಡಿದ ವಾಗ್ದಾನಗಳನ್ನು ಪೂರೈಸುವ ಭಾಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲರವರ ನೇತೃತದಲ್ಲಿ “ಕೊಟ್ಟ ಭಾಷೆಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು” ಎಂಬ ಸ್ಪಷ್ಟ ಮತ್ತು ಪ್ರಬಲ ತತ್ತ್ವದೊಂದಿಗೆ ಗ್ರಾಮದಾದ್ಯಂತ ನೈರ್ಮಲ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರ ಶುಚಿತ್ವ ಅಭಿಯಾನಕ್ಕೆ ಎರಡನೇ ವಾರ್ಡು ವ್ಯಾಪ್ತಿಯ ಕುಂಜತ್ತೂರಿನಿಂದ ಶುಕ್ರವಾರದಂದು ಅಧಿಕೃತ ಚಾಲನೆ ದೊರಕಿತು

ಈ ವಿಶೇಷ ಕಾರ್ಯಕ್ರಮವು ಸ್ಥಳೀಯ ಆಡಳಿತದ ಬದ್ಧತೆಯನ್ನು ಸಾರುವುದರ ಜೊತೆಗೆ, ಸಾರ್ವಜನಿಕರಲ್ಲಿ ಪರಿಸರ ಪ್ರೇಮ ಹಾಗೂ ಜವಾಬ್ದಾರಿಯನ್ನು ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಚುನಾವಣಾ ಸಮಯದಲ್ಲಿ ಕೊಟ್ಟ ಮಾತಿನಂತೆ ಮಂಜೇಶ್ವರವನ್ನು ಸಂಪೂರ್ಣ ಹಸಿರು ಮತ್ತು ಸ್ವಚ್ಛ ಪಂಚಾಯತ್ ಆಗಿ ಪರಿವರ್ತಿಸಲು ಹಾಗೂ ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಅಧ್ಯಕ್ಷರು ದೃಢಸಂಕಲ್ಪ ಮಾಡಿದ್ದಾರೆ. ಇದರ ಮೊದಲ ಹಂತವಾಗಿ ಶುಕ್ರವಾರದಂದು ಕುಂಜತ್ತೂರು ಜಂಕ್ಷನಿನಲ್ಲಿ ಅವಘಡ ಭೀತಿಯಲ್ಲಿದ್ದ ವಿದ್ಯುತ್ ಕಂಬವನ್ನು ಸುರಕ್ಷಿತವಾದ ಸ್ಥಳಕ್ಕೆ ತೆರವುಗೊಳಿಸಲಾಯಿತು.


ಕೇವಲ ಪಂಚಾಯತ್ ಸಿಬ್ಬಂದಿಯಷ್ಟೇ ಅಲ್ಲದೆ, ಮಾಜಿ ಪಂಚಾಯತ್ ಅಧ್ಯಕ್ಷ ಯು ಎಚ್ ಅಬ್ದುಲ್ ರಹ್ಮಾನ್, ಪಂಚಾಯತ್ ಸದಸ್ಯರಾದ ಇಲ್ಯಾಸ್ ತೂಮಿನಾಡು, ಹಸಿನಾ, ಯೂತ್ ಲೀಗ್ ನೇತಾರ ನೌಝಿಲ್, ಅಬೂಬಕ್ಕರ್ ಹಾಗೂ ಯುವಜನರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಈ ಆಂದೋಲನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಕಂಡು ಬಂತು.

ಇದರ ಜೊತೆಯಾಗಿ ಊರಿನ ರಸ್ತೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ಮಾರುಕಟ್ಟೆ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ.
ಪ್ರತಿ ಮನೆಮನೆಗೂ ಭೇಟಿ ನೀಡಿ ಒಣ ಕಸ ಮತ್ತು ಹಸಿ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಸಂಗ್ರಹಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
”ನಮ್ಮ ಗ್ರಾಮದ ನೈರ್ಮಲ್ಯ ನಮ್ಮೆಲ್ಲರ ಜವಾಬ್ದಾರಿ. ಕೊಟ್ಟ ಮಾತಿನಂತೆ ಮಂಜೇಶ್ವರವನ್ನು ಮಾದರಿ ಗ್ರಾಮವನ್ನಾಗಿಸಲು ನಾವೆಲ್ಲರೂ ಕೈಜೋಡಿಸೋಣ” ಎಂಬ ಸಂದೇಶದೊಂದಿಗೆ ಈ ಅಭಿಯಾನವು ಜನಮಾನಸದಲ್ಲಿ ಹೊಸ ಚೈತನ್ಯ ಮೂಡಿಸಿದೆ.



I love how I can play on the go without any glitches. The app version is just perfect for my daily breaks. Cheers to kishphapp!