ಕುಂಬಳೆ : ರಂಗ ಡಿಂಡಿಮ (ರಿ )ಕಾಸರಗೋಡು ಇದರ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾ ಮಟ್ಟದ ಒಂದು ದಿನದ ರಂಗಭೂಮಿ ಕಾರ್ಯಗಾರ ಕುಂಬಳೆ ಹೋಲಿ ಪ್ಯಾಮಲಿ ಶಾಲೆಯಲ್ಲಿ ಇಂದು ಜರಗಲಿದೆ.

ಕಾರ್ಯಕ್ರಮ ದ ಉದ್ಘಾಟನೆಯನ್ನು ಚುಟುಕು ಕವಿ, ರಂಗ ಭೂಮಿ ನಟ ಹರೀಶ್ ಸುಲಾಯ ಒಡ್ಡಬೆoಟ್ಟು ನೆರವೇರಿಸಲಿರುವರು. ರಂಗ ಡಿಂಡಿಮದ ಅಧ್ಯಕ್ಷರಾದ ಉದಯ್ ಸಾರಂಗ್ ರವರ ಅಧ್ಯಕ್ಷತೆಯಲ್ಲಿ ಜರಗುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಾಮಾಜಿಕ ಸಾಂಸ್ಕೃತಿಕ ಮುಂದಾಳು ಪ್ರಭಾವತಿ ಕೆದಿಲಾಯ ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಎ ಬಿ ಮಧುಸೂದಾನ್ ಬಳ್ಳಾಲ್,ಪತ್ರಕರ್ತರಾದ ಜಯ ಮನಿಯoಪಾರೆ, ಎಂನಾ ಚಂಬಲ್ತಿಮಾರ್, ಸಾಮಾಜಿಕ ಧಾರ್ಮಿಕ ಮುಂದಾಳು ಕಮಲಾಕ್ಷ ನಾಯಕ್ ನಲ್ಕ, ರಂಗ ನಟ ಶಶಿ ಕುಳೂರು, ಸಾವಿತ್ರಿ ಟೀಚರ್, ಅಶೋಕ್ ಕೊಡ್ಲಮೊಗರು,ಕೃಪಾಶ್ರೀ ಮೊದಲಾದವರು ಉಪಸ್ಥಿತರಿರುವರು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕಿ, ಪ್ರಸಿದ್ಧ ರಂಗ ನಿರ್ದೇಶಕರಾದ ವಿದ್ದು ಉಚ್ಚಿಲ್ ತರಗತಿ ನಡೆಸುವರು. ಸಂಜೆ ಜರಗುವ ಸಮಾರೋಪ ಸಮಾರಂಭದಲ್ಲಿ ಯತೀಶ್ ಕುಮಾರ್ ರೈ, ರವಿ ಮಲ್ಲಾವರ, ದಯಾನಂದ ರೈ ಕಳ್ವಾಜೆ, ಅಖಿಲೇಶ್ ನಗುಮೊಗo, ಶ್ರೀಧರ ಪನಿಯೂರು, ಶಶಿಧರ ಎದ್ರುತ್ತೋಡು,ಕಿರಣ್ ಕಲಾಜಲಿ, ಪುರುಷೋತ್ತಮ ಭಟ್,ವಿಖ್ಯಾತ್ ಬಾಡೂರು ಮೊದಲಾದವರು ಉಪಸ್ಥಿತರಿರುವರು.


