ಸ್ನೇಹ, ಸಹಬಾಳ್ವೆ, ಸಂತೋಷ ಮತ್ತು ಮಾನವೀಯತೆಯ ಸಂದೇಶ ಸಾರುವ ಓಣಂ ಹಬ್ಬವನ್ನು ಸ್ನೇಹಾಲಯದಲ್ಲಿ ಸಂಭ್ರಮ, ಸಡಗರ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಸಂಸ್ಥೆಯ ನಿವಾಸಿಗಳು ಹಾಗೂ ಸಿಬ್ಬಂದಿ ಒಟ್ಟಾಗಿ ಪಾಲ್ಗೊಂಡ ಈ ಕಾರ್ಯಕ್ರಮವು ಸ್ನೇಹಾಲಯದ ಆವರಣದಲ್ಲಿ ಹಬ್ಬದ ಸಂಭ್ರಮ ಮೂಡಿಸಿತು.

ಕಾರ್ಯಕ್ರಮವು ಸಾಂಪ್ರದಾಯಿಕ ಉದ್ಘಾಟನೆಯೊಂದಿಗೆ ಆರಂಭಗೊಂಡಿತು. ಸ್ನೇಹಾಲಯದ ಸಿಬ್ಬಂದಿ ಕುಮಾರಿ ಮಾನ್ಯಾ ಸ್ವಾಗತ ಭಾಷಣ ಮಾಡಿದರು. ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ಬ್ರದರ್ ಜೋಸೆಫ್ ಕ್ರಾಸ್ಟಾ, ಸಹ-ಸಂಸ್ಥಾಪಕಿ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಹಾಗೂ ವೈದ್ಯಕೀಯ ವಿಭಾಗದ ಮುಖ್ಯಸ್ಥ ಕ್ಲಿಂಟ್ ಜೋಸೆಫ್ ಅವರು ಓಣಂ ಹಬ್ಬದ ಮಹತ್ವವನ್ನು ತಿಳಿಸಿ, ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಟ್ರಸ್ಟೀ ಜೋವಿಯಲ್ ಕ್ರಾಸ್ಟಾ, ಸ್ನೇಹಾಲಯದ ಚಾಪ್ಲಿನ್ ಫಾ. ಸಿರಿಲ್ ಡಿಸೋಜಾ, ಟ್ರಸ್ಟೀ ಕುಮಾರಿ ಸರಿತಾ ಕ್ರಾಸ್ಟಾ, ಆಡಳಿತ ಅಧಿಕಾರಿ ವೀಣಾ ಡಿಸೋಜಾ ಹಾಗೂ ಸಂಸ್ಥೆಯ ಉಸ್ತುವಾರಿ ಶ್ರೀಮತಿ ಲವಿಟ ಡಿಸೋಜಾ ಉಪಸ್ಥಿತರಿದ್ದರು. ಸಮಾಲೋಚಕ ಶ್ರೀ ಜೆಸ್ವಿನ್ ವಂದನಾರ್ಪಣೆ ಸಲ್ಲಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಮನರಂಜನಾ ಆಟಗಳು, ವಿನೋದಭರಿತ ಚಟುವಟಿಕೆಗಳು ಹಾಗೂ ಸ್ನೇಹಪೂರ್ಣ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸಿಬ್ಬಂದಿ ಮತ್ತು ನಿವಾಸಿಗಳು ಯಾವುದೇ ಭೇದವಿಲ್ಲದೆ ಉತ್ಸಾಹದಿಂದ ಪಾಲ್ಗೊಂಡು ಓಣಂ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ಆಚರಣೆಯ ಪ್ರಮುಖ ಆಕರ್ಷಣೆಯಾಗಿದ್ದ ಸಾಂಪ್ರದಾಯಿಕ ಓಣಂ ಸದ್ಯದಲ್ಲಿ ಸಿಬ್ಬಂದಿ ಹಾಗೂ ನಿವಾಸಿಗಳು ಒಟ್ಟಾಗಿ ಕುಳಿತು ಭೋಜನ ಸವಿದರು. ಒಂದೇ ಸಾಲಿನಲ್ಲಿ, ಒಂದೇ ಮನೋಭಾವದಿಂದ ಊಟ ಹಂಚಿಕೊಂಡ ಈ ಕ್ಷಣವು ಓಣಂ ಸಾರುವ ಸಮಾನತೆ, ಸಹೋದರತ್ವ, ಏಕತೆ ಮತ್ತು ಹಂಚಿಕೊಳ್ಳುವ ಮನೋಭಾವವನ್ನು ಪ್ರತಿಬಿಂಬಿಸಿತು.

ಸ್ನೇಹಾಲಯದಲ್ಲಿ ನಡೆದ ಓಣಂ ಆಚರಣೆ ಕೇವಲ ಹಬ್ಬದ ಕಾರ್ಯಕ್ರಮವಾಗಿರದೆ, ಸಂಬಂಧಗಳನ್ನು ಬೆಸೆಯುವ, ಮನಸ್ಸುಗಳನ್ನು ಒಂದಾಗಿಸುವ ಹಾಗೂ ಮಾನವೀಯತೆಯನ್ನು ಸಂಭ್ರಮಿಸುವ ಸಂದರ್ಭವಾಗಿ ಮೂಡಿಬಂತು. ನಗು, ಸ್ನೇಹ, ಪ್ರೀತಿ, ಸಹಬಾಳ್ವೆ ಮತ್ತು ಕೃತಜ್ಞತೆಯಿಂದ ತುಂಬಿದ ಈ ಸಂಭ್ರಮವು ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.
ಸ್ನೇಹಾಲಯ ಕುಟುಂಬದ ಪರವಾಗಿ ಎಲ್ಲರಿಗೂ ಹೃತ್ಪೂರ್ವಕ ಓಣಂ ಶುಭಾಶಯಗಳನ್ನು ಕೋರಲಾಯಿತು.




The VIP perks here are actually worth it. I feel like a valued player every time I log in. Join the club at 8kbetvvip.
[8111]Outlookbet login ph | Legit online slots gcash sa Pilipinas,Gamitin ang outlookbet app download para sa mabilis na access. Mag-enjoy sa legit online slots gcash at pinakamabilis na payout casino. Mag-login na rito! visit: outlookbet