ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನಲ್ಲಿ ₹5 ಕೋಟಿ ಅವ್ಯವಹಾರ ಆರೋಪ; ಸಮಗ್ರ ತನಿಖೆಗೆ ಮಾಜಿ ಕಾರ್ಯದರ್ಶಿ ಆಗ್ರಹ

ಮಂಗಳಾ ಸ್ವಿಮ್ಮಿಂಗ್ ಕ್ಲಬ್ ಕಳೆದ 36 ವರ್ಷಗಳಿಂದ ಸಾರ್ವಜನಿಕರು ಹಾಗೂ ಕ್ರೀಡಾ ವಿದ್ಯಾರ್ಥಿಗಳಿಂದ 5 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದು, ಹಣಕಾಸಿನ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪವನ್ನು ಕ್ಲಬ್‌ನ ಮಾಜಿ ಕಾರ್ಯದರ್ಶಿ ಆರ್. ಧನರಾಜ್ ಮಾಡಿದ್ದಾರೆ .

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಾ ಸ್ವಿಮ್ಮಿಂಗ್ ಕ್ಲಬ್ 1990ರ ವರೆಗೆ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯಲ್ಲಿ ನೋಂದಣಿಯಾಗಿತ್ತು. 1990ರಿಂದ ಕ್ಲಬ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಕ್ಕಳಿಂದ ಹಣ ಪಡೆದು, ಅದರ ಸಮರ್ಪಕ ಲೆಕ್ಕಪತ್ರ ನೀಡದೆ ಸುಮಾರು 5 ಕೋಟಿ ರೂ. ಹಣದ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಕ್ಲಬ್‌ನ ಹಣಕಾಸು ವ್ಯವಹಾರಗಳ ಕುರಿತು ಸೂಕ್ತ ತನಿಖೆ ನಡೆಸಬೇಕು. ಆರೋಪಗಳು ಸಾಬೀತಾದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೆ, ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನ ಪರವಾನಗಿಯನ್ನು ರದ್ದುಪಡಿಸಬೇಕು. ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಷನ್‌ನಿಂದ ಪಡೆದಿರುವ ಮಾನ್ಯತೆಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ರದ್ದುಪಡಿಸಬೇಕು. ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಕ್ಲಬ್‌ಗೆ ನೀಡಿರುವ ಅವಕಾಶವನ್ನೂ ರದ್ದುಪಡಿಸಬೇಕು ಎಂದು ಧನರಾಜ್ ಒತ್ತಾಯಿಸಿದರು.

ಕ್ಲಬ್‌ನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿ, ಹಣಕಾಸಿನ ಅಕ್ರಮ ಕಂಡುಬಂದಲ್ಲಿ ಖಾತೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಕ್ಲಬ್‌ನ ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆರ್. ಧನರಾಜ್ ಆಗ್ರಹಿಸಿದರು.

SHARE
Loading spinner

2 thoughts on “ಮಂಗಳಾ ಸ್ವಿಮ್ಮಿಂಗ್ ಕ್ಲಬ್‌ನಲ್ಲಿ ₹5 ಕೋಟಿ ಅವ್ಯವಹಾರ ಆರೋಪ; ಸಮಗ್ರ ತನಿಖೆಗೆ ಮಾಜಿ ಕಾರ್ಯದರ್ಶಿ ಆಗ್ರಹ”

  1. [3607]2777bd | অনলাইন ক্যাসিনো এবং বেটিং গেমস বাংলাদেশি খেলোয়াড়দের জন্য | 2777bd লগইন, অ্যাপ ডাউনলোড এবং ডিপোজিট,একটি অনলাইন ক্যাসিনো গেমিং সাইট যা বাংলাদেশি খেলোয়াড়দের জন্য তৈরি করা হয়েছে 2777bd, যেখানে আপনি লগইন এবং রেজিস্ট্রেশন করতে পারেন, অ্যাপ ডাউনলোড করে ক্যাসিনো গেমস খেলতে পারেন এবং পেমেন্ট সংক্রান্ত তথ্য পড়তে পারেন। visit: 2777bd

    Loading spinner

Leave a Reply

Your email address will not be published. Required fields are marked *

error: Content is protected !!