ಅಪಹರಣ, ಕೊಲೆ ಬೆದರಿಕೆ, ಹಣ ದೋಚಾಟ; ಪ್ರಮುಖ ಆರೋಪಿ ಬಂಧನ

​ಕಾಸರಗೋಡು: ಯುವಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿ, ಕೊಲೆ ಬೆದರಿಕೆ ಹಾಕಿ ಗೂಗಲ್ ಪೇ ಮೂಲಕ ಹಣ ಲಪಟಾಯಿಸಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಮೇಲ್ಪರಂಬ ಪೊಲೀಸರು ಸಿನಿಮಾ ಶೈಲಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಚೆಟ್ಟುಂಗುಳಿ ಎಸ್‌ಪಿ ನಗರದ ಸೈನುಲ್ ಆಬೀದ್ (34) ಬಂಧಿತ ಕುಖ್ಯಾತ.

​ಆಗಸ್ಟ್ 24ರಂದು ಕಳನಾಡು ತಾಯಲ್ ನಿವಾಸಿ ಮುಹಮ್ಮದ್ ಅನ್‌ಸೀನ್ (19) ಎಂಬಾತನನ್ನು ದುಷ್ಕರ್ಮಿಗಳು ಕಾರಿನಲ್ಲಿ ಅಪಹರಿಸಿ ಬೆದರಿಸಿ 20,000 ರೂಪಾಯಿ ದೋಚಿದ್ದರು. ಈ ಕೃತ್ಯದ ತನಿಖೆ ನಡೆಸುತ್ತಿದ್ದ ಪೊಲೀಸರು ಆರೋಪಿ ನೆಲೆಸಿದ್ದ ಮನೆಗೆ ದಾಳಿ ಮಾಡಿದ್ದರು. ಈ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾದ ಆರೋಪಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣ ಎಚ್ಚೆತ್ತ ಸಿಬ್ಬಂದಿ ತಮ್ಮ ಜೀಪಿನಲ್ಲಿ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಆತನನ್ನು ಲಾಕ್ ಮಾಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಈತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬನಿಗಾಗಿ ಶೋಧ ಮುಂದುವರಿದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!