ಮಂಜೇಶ್ವರ : ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ಮಿಹ್ರಾನ್ ಮೊಹಮ್ಮದ್ ಮತ್ತು ಮೊಹಮ್ಮದ್ ಲಿಬಾನ್ ಎಂಬ ವಿದ್ಯಾರ್ಥಿಗಳನ್ನು ಮಂಜೇಶ್ವರ ಕಮ್ಯುನಿಟಿ ಸೆಂಟರ್ ಎಂ ಸಿ ಸಿ ಸಂಘಟನೆಯ ವತಿಯಿಂದ ಪ್ರೋತ್ಸಾಹ ಧನ ಸಹಾಯ ನೀಡಿ ಗೌರವಿಸಲಾಯಿತು.

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಾಧನೆಗೈದ ವಿದ್ಯಾರ್ಥಿಗಳಿಗೆ ತಲಾ 5000 ರೂಪಾಯಿ ನಗದು ನೀಡಿ ಗೌರವಿಸಿದರು.ವಿದ್ಯಾರ್ಥಿಗಳ ಈ ಶೈಕ್ಷಣಿಕ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

