ಹಲವು ಚಲನಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿದ ತುಳು ಚಿತ್ರ “ಪಿದಾಯಿ”ಮೇ 9 ರಂದು ಬೆಳ್ಳಿತೆರೆಗೆ

ರಮೇಶ್ ಶೆಟ್ಟಿಗಾರರ ಕಥೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನಮಾಡಿ ನಮ್ಮ ಕನಸು ಬ್ಯಾನರಿನಲ್ಲಿ ಕೆ ಸುರೇಶ್ ಅವರು ನಿರ್ಮಿಸಿರುವ ಚಿತ್ರ ಪಿದಾಯಿ ಮೇ 9ರಂದು ಬೆಳ್ಳಿಯಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಚಿತ್ರತಂಡ ತಿಳಿಸಿದರು

ಕೋಲ್ಕತ್ತಾ, ಸಿಮ್ಲ, ಜಾರ್ಕಂಡ್, ಹಾಗೂ ಕ್ಯಾಲಿಫೋರ್ನಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತವಾಗಿ ಆಯ್ಕೆ ಆಗುವುದರ ಜೊತೆಗೆ, 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಪ್ರಥಮವಾಗಿ ತುಳು ಚಿತ್ರವೊಂದು ಭಾರತೀಯ ಚಲನಚಿತ್ರ ಹಾಗೂ ಕನ್ನಡ ಚಲನಚಿತ್ರ ಹೀಗೆ ಎರಡೂ ವಿಭಾಗಗಳಲ್ಲಿ ಸ್ಪರ್ಧೆಯಲ್ಲಿ ಅಂತಿಮವಾಗಿ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಿದಾಯಿ ಮುಡಿಗೇರಿಸಿದೆ

ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು, ಮಂಜೇಶ್ವರದ ಗಡಿಭಾಗದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡದ ಖ್ಯಾತ ನಟ ಶರತ್ ಲೋಹಿತಾಶ್ವರ ಜೊತೆ ತುಳು ಚಿತ್ರರಂಗದ ಹಲವರು ಅಭಿನಯಿಸಿದ್ದಾರೆ

ಚಿತ್ರಕ್ಕೆ ಅಜಯ್ ನಂಬೂದರಿಯವರು ಸಂಗೀತ ನೀಡಿದ್ದು, ಪದ್ಮ ಶ್ರೀ ಕೈತಪ್ರಮ್ ನಂಬೂದರಿ, ಕನ್ನಡಕ್ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತರಾದ ಸುಧೀರ್ ಅತ್ತಾವರ, ತುಳು ಅಕಾಡಮಿ ಪ್ರಶಸ್ತಿ ವಿಜೇತರಾದ ಕುಶಾಲಾಕ್ಷಿ ಕಣ್ವತೀರ್ಥ ರವರ ಸಾಹಿತ್ಯವಿದ್ದು. ಪ್ರಸಿದ್ಧ ಗಾಯಕರಾದ ವಿದ್ಯಾನಿಧಿ ಡಾಕ್ಟರ್ ವಿದ್ಯಾಭೂಷಣ್ ಪ್ರಥಮವಾಗಿ ಈ ಸಿನಿಮಾದ ಹಾಡಿಗೆ ಕಂಠದಾನ ಮಾಡಿದ್ದಾರೆ

ಸಂಪ್ರದಾಯಾಕರ ಮನೆಗೆ ವಿದ್ಯಾವಂತೆ ಹುಡುಗಿ ಸೋಸೆಯಾಗಿ
ಬಂದಾಗ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರನ್ನು ನೋಡಿಕೊಳ್ಳುವ ಮತ್ತು ನಡೆಸಿಕೊಳ್ಳುವ ರೀತಿಯನ್ನು ಕಂಡು ಅವಳು ನಡೆಸುವ ಸಾತ್ವಿಕ ಸಂಘರ್ಷ ಈ ಚಿತ್ರದ ಕಥಾವಸ್ತುವಾಗಿದ್ದು, ತುಳುನಾಡಿನ ವಿಶೇಷತೆಯಾದ ಕುಣಿತಾ ಭಜನೆಯನ್ನು ಸಿನಿಮಾದಲ್ಲಿ ನೋಡಾಬಹುದು ಎಂದು ಚಿತ್ರ ತಂಡ ಹೇಳಿದರು ಪತ್ರಿಕಾ ಗೋಷ್ಠಿಯಲ್ಲಿ ನಿರ್ದೇಶಕ ಸಂತೋಷ್ ಮಾಡರ ಜೊತೆ, ಶರತ್ ಲೋಹಿತಾಶ್ವ, ನಟ ಪುಷ್ಪರಾಜ್ ಬೋಳಾರ್, ಡಿ. ಬಿ ಶೇಖರ್, ಅಭಿ ವರ್ಕಾಡಿ. ಉಪಸ್ಥಿತಿ ಇದ್ದರು
ಪಿದಾಯಿ ಚಿತ್ರವು ದಕ್ಷಿಣ ಕನ್ನಡದಾದ್ಯಂತ ಮೇ 9ರಂದು 15 ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!