2009 ನೇ ಸಾಲಿನ ಮೇ ತಿಂಗಳಲ್ಲಿ ವಾಹನಗಳನ್ನು ಖರೀದಿಸಲು ಸಾಲ/ಹಣಕಾಸು ಸಹಾಯ ಮಾಡುವ ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ಷರತ್ತುಗಳಿಗೆ ಒಪ್ಪಿ ಟೆಲ್ಕಾನ್ ಇ ಎಕ್ಸ್ 70 ಮೆಶಿನ್ ವಾಹನವನ್ನು ಖರೀದಿಸುವ ಬಗ್ಗೆ 10,00,000/- ರೂಪಾಯಿ ಸಾಲ ಪಡೆದಿದ್ದು , ಷರತ್ತಿನಂತೆ ವಾಹನ ಖರೀದಿಸಿದ ಬಳಿಕ ವಾಹನದ ಸಾಲದ ಕಂತನ್ನು ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ಮರುಪಾವತಿಸದೇ ಬಾಕಿ ಇರಿಸಿದ್ದು, ವಾಹನವನ್ನು ತಪಾಸಣೆ ಬಗ್ಗೆ ಹಾಜರುಪಡಿಸಲು ತಿಳಿಸಿದಲ್ಲಿ ವಾಹನವನ್ನು ಹಾಜರುಪಡಿಸದೇ ಶ್ರೀರಾಮ್ ಫೈನಾನ್ಸ್ ಸಂಸ್ಥೆಗೆ ವಂಚನೆ ಮಾಡಿರುವ ಬಗ್ಗೆ ಶ್ರೀನಿವಾಸ ಬಿ.ಆರ್. ವಾಸ: ಬೈತಡ್ಕ ಮನೆ, ಜಾಲ್ಸೂರು ಎಂಬವರ ವಿರುದ್ದ ಮೂಡಬಿದ್ರೆ ಠಾಣೆಯಲ್ಲಿ ಶ್ರೀರಾಮ್ ಫೈನಾನ್ಸ್ ಸಂಸ್ಥೆಯ ದೂರಿನಂತೆ ಮೂಡಬಿದ್ರೆ ಠಾಣೆಯಲ್ಲಿ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದಲ್ಲಿ ಆರೋಪಿ ಶ್ರೀನಿವಾಸ ಬಿ.ಆರ್ (48) ತಂದೆ: ದಿ| ರಾಮ್ ಕುಮಾರ್ ವಾಸ: ಬೈತಡ್ಕ ಮನೆ, ಜಾಲ್ಸೂರು ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬಾತನಿಗೆ ಮಾನ್ಯ ನ್ಯಾಯಾಲಯ ಸಿಸಿ ನಂಬ್ರ 526/2025 ರಲ್ಲಿ ಜಾಮೀನು ರಹಿತ ವಾರಂಟ್ ಹೊರಡಿಸಿರುತ್ತದೆ, ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ ಶ್ರೀನಿವಾಸ ಬಿ.ಆರ್ (48) ತಂದೆ: ದಿ| ರಾಮ್ ಕುಮಾರ್ ವಾಸ: ಬೈತಡ್ಕ ಮನೆ, ಜಾಲ್ಸೂರು ಅಂಚೆ ಮತ್ತು ಗ್ರಾಮ, ಸುಳ್ಯ ತಾಲೂಕು ಎಂಬಾತನನ್ನು ಉತ್ತರ ಉಪವಿಭಾಗದ ಅಪರಾಧ ಪತ್ತೆ ತಂಡವು ದಿನಾಂಕ 02-09-2026 ರಂದು ಜಾಲ್ಸೂರು ಗ್ರಾಮದ ಬೈತಡ್ಕ ಜಂಕ್ಷನ್ ಎಂಬಲ್ಲಿ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈತನ ವಿರುದ್ದ ಬಾಕಿ ಇರುವ ದಸ್ತಗಿರಿ ವಾರಂಟ್ ಗಳು
1] ಮೂಡಬಿದ್ರೆ ಠಾಣಾ ಅ.ಕ್ರ. 59/2012 ಕಲಂ 406, 420, 421 ಜತೆಗೆ 34 ಐಪಿಸಿ (ಸಿಸಿ ನಂಬ್ರ 526/2025)
2] ಮಾನ್ಯ ಜೆಎಂಎಫ್ ಸಿ 5 ನೇ ನ್ಯಾಯಾಲಯ, ಮಂಗಳೂರು ಸಿಸಿ ನಂಬ್ರ 1453/2024 (ಚೆಕ್ ಬೌನ್ಸ್ ಪ್ರಕರಣ)

