ವಾಷಿಂಗ್ಟನ್: ಇರಾನ್‌ನ ರಹಸ್ಯ ಭೂಗತ ಪರಮಾಣು ನೆಲೆ ‘ಪಿಕ್ಯಾಕ್ಸ್ ಮೌಂಟನ್’ ಮೇಲೆ ಅಗತ್ಯಬಿದ್ದರೆ ಅಮೆರಿಕ ಶೀಘ್ರದಲ್ಲೇ ದಾಳಿ ನಡೆಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಇರಾನ್ ಪರಮಾಣು ಬಾಂಬ್ ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದು ಪತ್ತೆಯಾದರೆ ಆ ನೆಲೆಯನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಅಮೆರಿಕದ ಗುಪ್ತಚರ ಸಂಸ್ಥೆಗಳು ಪಿಕ್ಯಾಕ್ಸ್ ಮೌಂಟನ್‌ನ ಚಟುವಟಿಕೆಗಳ ಮೇಲೆ ನಿಗಾ ಇರಿಸಿವೆ ಎಂದು ಅವರು ತಿಳಿಸಿದ್ದಾರೆ.

ನತಾಂಜ್ ಪರಮಾಣು ಘಟಕದ ಸಮೀಪದಲ್ಲಿರುವ ಈ ಆಳವಾದ ಭೂಗತ ಸಂಕೀರ್ಣದಲ್ಲಿ ಇರಾನ್ ಸಾವಿರಾರು ಸೆಂಟ್ರಿಫ್ಯೂಜ್‌ಗಳನ್ನು ಸ್ಥಳಾಂತರಿಸಿದೆ ಎಂದು ವರದಿಯಾಗಿದೆ. ಈ ತಾಣದ ಮೇಲೆ ದಾಳಿ ನಡೆದರೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದೇ ಅಮೆರಿಕದ ಸೇನಾ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

