ಮಂಜೇಶ್ವರ: ಗಡಿ ಪ್ರದೇಶವಾದ ತೂಮಿನಾಡಿನಲ್ಲಿ ನಡೆದ 7 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಸಡಗರದೊಂದಿಗೆ ಸಂಪನ್ನಗೊಂಡಿತು.
ವಿಷ್ನೇಶ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದ್ಯಾವರ ಮಾಡ ಕ್ಷೇತ್ರದ ದೈವ ಪಾತ್ರಿ ಮಂಜು ಬೆಳ್ಚಪ್ಪಾಡ ದೀಪ ಪ್ರಜ್ವಲನೆ ನಡೆಸಿದರು.


ಈ ಸಂದರ್ಭ ಕರ್ನಾಟಕ ವಿಧಾನ ಪರಿಷತ್ ಶಾಸಕ ಅಶೋಕ ಕುಮಾರ್ ಪುತ್ತೂರು, ಧಾರ್ಮಿಕ ಮುಂದಾಳು ಶ್ರೀ ಕೃಷ್ಣ ಶಿವ ಕೃಪಾ, ವಾರ್ಡ್ ಸದಸ್ಯ ಇಲ್ಯಾಸ್ ತೂಮಿನಾಡು, ಚಲನಚಿತ್ರ ನಟರಾದ ಜೆ ಪಿ ತೂಮಿನಾಡು, ಪ್ರಕಾಶ್ ತೂಮಿನಾಡು, ಪದ್ಮನಾಭ ತೂಮಿನಾಡು, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಬಳಿಕ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿ ತೂಮಿನಾಡು ಇವರ ವತಿಯಿಂದ ಶ್ರೀ ಕ್ರಷ್ಣ ದೇವರ ಮೊಸರು ಕುಡಿಕೆಯ ಶೋಭ ಯಾತ್ರೆ ವಾದ್ಯ ಘೋಷಗಳೊಂದಿಗೆ ಹೊರಟು ಬ್ರಹ್ಮ ಶ್ರೀ ಮುಗೇರ ಮಹಾಕಾಳಿ ದೈವಸ್ಥಾನ ಮತ್ತು ಸಾರ್ವಜನಿಕ ಶ್ರೀ ಮಹಾಕಾಳಿ ಭಜನಾ ಮಂದಿರದಲ್ಲಿ ಸಂಪನ್ನಗೊಂಡಿತು.

