ಮಂಜೇಶ್ವರ: ವ್ಯಕ್ತಿಯ ಬರ್ಬರ ಹತ್ಯೆ; ಇಬ್ಬರು ಆರೋಪಿಗಳು ಪರಾರಿ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾದ ಘಟನೆ ನಡೆದಿದೆ.

ಮೃತರನ್ನು ಕರ್ನಾಟಕ ಮೂಲದ ರಮೇಶ್ (42) ಎಂದು ಗುರುತಿಸಲಾಗಿದೆ.
​ಶುಕ್ರವಾರ ರಾತ್ರಿ ಸುಮಾರು 7:45ರ ವೇಳೆಗೆ ಹೊಸಂಗಡಿಯ ನರಸಿಂಹ ಮೂರ್ತಿ ಎಂಬವರ ಹಳೆಯ ಮನೆಯೊಂದರಲ್ಲಿ ತಲೆ ಜಜ್ಜಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಇವರ ಮೇಲೆ ಭೀಕರ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

​ಘಟನೆಯ ಹಿಂದೆ ಭಾಗಿಯಾಗಿದ್ದಾರೆನ್ನಲಾದ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.

SHARE
Loading spinner

One thought on “ಮಂಜೇಶ್ವರ: ವ್ಯಕ್ತಿಯ ಬರ್ಬರ ಹತ್ಯೆ; ಇಬ್ಬರು ಆರೋಪಿಗಳು ಪರಾರಿ

Leave a Reply

Your email address will not be published. Required fields are marked *

error: Content is protected !!