ತೊಕ್ಕೋಟು: ಕಳೆದ 17 ವರ್ಷಗಳಿಂದ ತೊಕ್ಕೋಟುವಿನಲ್ಲಿ ವಿವಿಧ ಸಮಾಜಸೇವೆ ಹಾಗೂ ಆರ್ಥಿಕ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪ್ರಿಯವಾಗಿರುವ ಎಬಿಸಿ ತೊಕ್ಕೋಟು ತಂಡದ 18ನೇ ವರ್ಷದ ಹುಲಿವೇಶದ ಊದು ಪೂಜೆ ಕಾರ್ಯಕ್ರಮವು ಶುಕ್ರವಾರ ತೊಕ್ಕೋಟು ಒಳಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿತು.



ರಾಜಕೀಯ ಕ್ಷೇತ್ರದ ಹಲವು ಗಣ್ಯರು, ಖ್ಯಾತ ಹಿರಿಯ ಹುಲಿವೇಶ ಕುಣಿತಗಾರರು ಹಾಗೂ ಸಿನೆಮಾ ರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತಂಡಕ್ಕೆ ಶುಭ ಹಾರೈಸಿದರು.



ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.



ಬೀರಿಯಲ್ಲಿ ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಎಬಿಸಿ ತಂಡದ ವತಿಯಿಂದ 90 ಹುಲಿವೇಶದಾರಿಗಳು ಭಾಗವಹಿಸಿ ಭರ್ಜರಿ ಪ್ರದರ್ಶನ ನೀಡಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಹುಲಿವೇಶದ ಊದು ಪೂಜೆಯು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು.






ತಂಡದ ಸದಸ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

