ಪೆರ್ಲ:ಶಿಕ್ಷಕರು ಕೇವಲ ಪಾಠ ಹೇಳಿಕೊಡುವವರಲ್ಲ; ಬದುಕಿನ ದಾರಿಯಲ್ಲಿ ಬೆಳಕಿನ ಹೆಜ್ಜೆ ಗುರುತು ಮೂಡಿಸುವ ಮಾರ್ಗದರ್ಶಕರು. ಇಂತಹ ಗುರುಗಳ ಸೇವೆಯನ್ನು ನೆನಪಿಸಿಕೊಂಡು, ಅವರ ಮನೆಬಾಗಿಲಿಗೆ ತೆರಳಿ ಗೌರವ ಸಲ್ಲಿಸುವ ಮೂಲಕ ಎಣ್ಮಕಜೆ ಗ್ರಾಮ ಪಂಚಾಯತಿನ ಜನಪ್ರತಿನಿಧಿಯೊಬ್ಬರು ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿಯ ಐದನೇ ವಾರ್ಡಿನ ಸದಸ್ಯೆ ಆಯಿಷಾ ಎ.ಎ. ಪೆರ್ಲ ಅವರ ನೇತೃತ್ವದಲ್ಲಿ ತಮ್ಮ ವಾರ್ಡಿನ ಹಿರಿಯ ನಿವೃತ್ತ ಶಿಕ್ಷಕರನ್ನು ಅವರ ನಿವಾಸದಲ್ಲೇ ಭೇಟಿ ಮಾಡಿ ಸನ್ಮಾನಿಸಲಾಯಿತು.


ಮೊದಲಿಗೆ ಸ್ವರ್ಗ ಶಾಲೆಯ ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ವಾಸುದೇವ ಭಟ್ (ಶಿವ ಪಡ್ರೆ) ಮತ್ತು ಅವರ ಪತ್ನಿ, ನಿವೃತ್ತ ಮುಖ್ಯಶಿಕ್ಷಕಿ ಪ್ರಭಾವತಿ ಟೀಚರ್ ದಂಪತಿಯನ್ನು ಗೌರವಿಸಲಾಯಿತು. ಹಲವು ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಬಳಿಕ ನಿವೃತ್ತ ಮುಖ್ಯೋಪಾಧ್ಯಾಯ ಅಹಮ್ಮದ್ ಅಲಿ ಮಾಸ್ಟರ್, ಪೆರ್ಲದ ನಿವೃತ್ತ ಶಿಕ್ಷಕಿಯರಾದ ಜಯಕುಮಾರಿ ಟೀಚರ್ ಹಾಗೂ ಸರೋಜ ಟೀಚರ್ ಅವರನ್ನು ಸಹ ಗೌರವಿಸಲಾಯಿತು.

ಶಾಲೆಯ ತರಗತಿ ಕೊಠಡಿಗಳಲ್ಲಿ ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಹಾಕಿದ ಗುರುಗಳ ಮನೆಗಳಿಗೆ ತೆರಳಿ ಅವರನ್ನು ಗೌರವಿಸುವ ಮೂಲಕ, ಶಿಕ್ಷಕರ ದಿನಾಚರಣೆಯ ನಿಜವಾದ ಆಶಯವನ್ನು ಮನೆಮನೆಗೆ ತಲುಪಿಸುವ ಪ್ರಯತ್ನ ಕಂಡುಬಂತು.
ಈ ಸಂದರ್ಭದಲ್ಲಿ ಕೇರಳ ರಾಜ್ಯ ಕಿರು ಕೈಗಾರಿಕಾ ವ್ಯವಸಾಯಿ ಜಿಲ್ಲಾಧ್ಯಕ್ಷ ರಾಜರಾಮ ಪೆರ್ಲ, ಕೆಇಬಿ ನಿವೃತ್ತ ಇಂಜಿನಿಯರ್ ಅಬ್ದುಲ್ ರಸಾಕ್ ಪೆರ್ಲ, ನಿವೃತ್ತ ಸಬ್ ರಿಜಿಸ್ಟ್ರಾರ್ ಮೊಹಮ್ಮದಾಲಿ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.

ನಿವೃತ್ತ ಹಿರಿಯ ಗುರುಗಳ ಮುಖದಲ್ಲಿನ ಸಂತೃಪ್ತಿಯ ನಗು, ಅವರನ್ನು ಗೌರವಿಸಿದವರ ಕಣ್ಣಲ್ಲಿನ ಕೃತಜ್ಞತೆ—ಇವೆರಡರ ನಡುವೆ ಮೂಡಿದ ಆತ್ಮೀಯತೆಯೇ ಈ ಶಿಕ್ಷಕರ ದಿನಾಚರಣೆಯ ಅತ್ಯಂತ ಸುಂದರ ಕ್ಷಣವಾಗಿತ್ತು.



The mobile experience is just seamless. I can play anywhere and the loading times are incredibly short. j88betapp is a game changer.