ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನದ ಸೆಪ್ಟೆಂಬರ್ ತಿಂಗಳ ಮಾಸಿಕ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಕದ್ರಿ ಮಲ್ಲಿಕಟ್ಟೆಯ ಕೇಂದ್ರ ಗ್ರಂಥಾಲಯ ಉದ್ಯಾನವನದಲ್ಲಿ ಎಂ.ಆರ್.ಪಿ.ಎಲ್–ಒಎನ್ಜಿಸಿ ಸಂಸ್ಥೆಯ ಜನರಲ್ ಮ್ಯಾನೇಜರ್ ಶ್ರೀ ಮಂದಾರ್ ಕಾಲೆ ಹಾಗೂ ಬಿಳಿಗಿರಿ ರಂಗನಾಥಸ್ವಾಮಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಅವರು ಚಾಲನೆ ನೀಡಿದರು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ನ ಪ್ರಾಂಶುಪಾಲರಾದ ಡಾ. ಜ್ಞಾನೇಶ್ವರ ಪೈ ಮಾರೂರ್, ಭಾರತೀಯ ಸೇನೆಯ ನಿವೃತ್ತ ಯೋಧರಾದ ಶ್ರೀ ಗೋಪಿನಾಥ ರಾವ್, ಶ್ರೀ ಸತ್ಯನಾರಾಯಣ ಕೆ.ವಿ. ಹಾಗೂ ದಿಲ್ ರಾಜ್ ಆಳ್ವ ಅವರು ಉಪಸ್ಥಿತರಿದ್ದು, ಸ್ವಯಂಸೇವಕರನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಂದಾರ್ ಕಾಲೆ ಅವರು ರಾಮಕೃಷ್ಣ ಮಿಷನ್ನ ಸ್ವಯಂಸೇವಕರು ಸ್ವಚ್ಛತೆ ಹಾಗೂ ನಾಗರಿಕ ಜವಾಬ್ದಾರಿಯ ನಿಟ್ಟಿನಲ್ಲಿ ತೋರಿಸುತ್ತಿರುವ ಬದ್ಧತೆಯನ್ನು ಶ್ಲಾಘಿಸಿದರು. ಸ್ವಚ್ಛ ಮಂಗಳೂರು ಅಭಿಯಾನದ ಆರಂಭದಿAದಲೂ ಎಂ.ಆರ್.ಪಿ.ಎಲ್–ಒಎನ್ಜಿಸಿ ಸಂಸ್ಥೆಯು ಈ ಮಹತ್ವದ ಕಾರ್ಯದೊಂದಿಗೆ ಕೈಜೋಡಿಸಿರುವುದನ್ನು ಅವರು ಉಲ್ಲೇಖಿಸಿದರು.
ಶಶಿಕಲಾ ಅವರು ಮಾತನಾಡಿ, ಬಿ.ಆರ್. ಹಿಲ್ಸ್ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯವಿಧಾನಗಳನ್ನು ತಿಳಿದುಕೊಳ್ಳಲು ಹಾಗೂ ಉತ್ತಮ ಸ್ವಚ್ಛತಾ ಪದ್ಧತಿಗಳನ್ನು ಕಲಿಯಲು ಮಂಗಳೂರಿಗೆ ಆಗಮಿಸಿರುವುದಾಗಿ ತಿಳಿಸಿದರು. ರಾಮಕೃಷ್ಣ ಮಿಷನ್ ಅನುಸರಿಸುತ್ತಿರುವ ವ್ಯವಸ್ಥಿತ ಕಾರ್ಯವೈಖರಿಯಿಂದ ಪ್ರೇರಣೆ ಪಡೆದು, ಸೂಕ್ತವಾದ ಉತ್ತಮ ಪದ್ಧತಿಗಳನ್ನು ಬಿ.ಆರ್. ಹಿಲ್ಸ್ನಲ್ಲಿಯೂ ಅಳವಡಿಸಿಕೊಳ್ಳುವ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಡಾ. ಜ್ಞಾನೇಶ್ವರ ಪೈ ಮರೂರ್ ಅವರು, ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯನ್ನು ಕೇವಲ ಒಂದು ಚಟುವಟಿಕೆಯಾಗಿ ನೋಡದೆ, ಜೀವನದ ಒಂದು ಭಾಗವನ್ನಾಗಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಿರಿಯ ಸ್ವಯಂಸೇವಕರಾದ ಕಮಲಾಕ್ಷ ಪೈ, ಸುಕುಮಾರ್ ಸಾಲ್ಯಾನ್, ದಾಮೋದರ ಭಟ್, ಅನಿರುದ್ಧ ನಾಯಕ್ ಹಾಗೂ ಸಚಿನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಷನಲ್ ಎಜುಕೇಶನ್ನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕೇಂದ್ರ ಗ್ರಂಥಾಲಯದ ಹೊರಭಾಗ ಮತ್ತು ಕಾಲುದಾರಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಸಂಗ್ರಹವಾಗಿದ್ದ ಕಸ, ಒಣ ಎಲೆಗಳು, ಅವಶೇಷಗಳು ಹಾಗೂ ಅನಗತ್ಯ ಬ್ಯಾನರ್ಗಳನ್ನು ತೆರವುಗೊಳಿಸಿ, ಸಾರ್ವಜನಿಕ ಬಳಕೆಗೆ ಸ್ಥಳವನ್ನು ಸ್ವಚ್ಛ ಹಾಗೂ ಅಚ್ಚುಕಟ್ಟಾಗಿ ಮಾಡಲಾಯಿತು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿಯ ಅಧ್ಯಾಪಕರಾದ ಶ್ರೀ ರಾಹುಲ್ ಭಟ್ ಹಾಗೂ ಶ್ರೀ ಜೋಯಲ್ ಲೋಬೋ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಉದ್ಯಾನವನದ ಒಳಭಾಗವನ್ನು ಸ್ವಚ್ಛಗೊಳಿಸಿದರು. ಕಳೆ ಮತ್ತು ಅತಿಯಾಗಿ ಬೆಳೆದ ಹುಲ್ಲನ್ನು ತೆರವುಗೊಳಿಸಿ, ನಡಿಗೆ ಮಾರ್ಗಗಳು ಹಾಗೂ ಮಕ್ಕಳ ಆಟದ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. ಹಿರಿಯ ಸ್ವಯಂಸೇವಕರಾದ ಅವಿನಾಶ್, ಪ್ರೊ. ಪ್ರಕಾಶ್, ನವನೀತ್ ಶೆಟ್ಟಿ, ಪ್ರಜ್ವಲ್ ಹಾಗೂ ಪ್ರಥಮ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಕದ್ರಿ ಗೋಪಾಲನಾಥ್ ಸ್ಮಾರಕದ ಸ್ವಚ್ಛತೆ
ಶ್ರೀನಿವಾಸ ಇನ್ಸ್ಟಿಟ್ಯೂಟ್ ಆಫ್ ಏವಿಯೇಷನ್ನ ವಿದ್ಯಾರ್ಥಿಗಳು ಹಿರಿಯ ಸ್ವಯಂಸೇವಕರಾದ ತಾರಾನಾಥ ಆಳ್ವ, ಬಾಲಕೃಷ್ಣ ಭಟ್ ಹಾಗೂ ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ಉದ್ಯಾನವನದಲ್ಲಿರುವ ಸಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಸ್ಮಾರಕವನ್ನು ಸ್ವಚ್ಛಗೊಳಿಸಿದರು. ಸ್ಮಾರಕದ ಗೋಡೆಗಳ ಮೇಲಿದ್ದ ಪಾಚಿ ಹಾಗೂ ಶೈವಲವನ್ನು ಉಜ್ಜಿ ತೆರವುಗೊಳಿಸಿ, ಬ್ಲೀಚಿಂಗ್ ಪೌಡರ್ ಬಳಸಿ ಸ್ವಚ್ಛಗೊಳಿಸಲಾಯಿತು. ನೀರಿನ ಟ್ಯಾಂಕ್ನ ಸಹಾಯದಿಂದ ಗೋಡೆಯ ಕಾರಂಜಿಯನ್ನೂ ಶುಚಿಗೊಳಿಸಲಾಯಿತು.

ಬಿ.ಆರ್. ಹಿಲ್ಸ್ ಗ್ರಾಮ ಪಂಚಾಯಿತಿ ಸಿಬ್ಬಂದಿಯ ವಿಶೇಷ ಭಾಗವಹಿಸುವಿಕೆ
ಈ ತಿಂಗಳ ಕಾರ್ಯಕ್ರಮದ ವಿಶೇಷ ಅಂಶವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವರ ನೇತೃತ್ವದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಶ್ರಮದಾನದಲ್ಲಿ ಭಾಗವಹಿಸಿದರು. ಅವರು ಸ್ವಚ್ಛತಾ ಕಾರ್ಯಗಳಲ್ಲಿ ನೇರವಾಗಿ ಪಾಲ್ಗೊಂಡು, ಹಿರಿಯ ಸ್ವಯಂಸೇವಕರೊAದಿಗೆ ಸಂವಾದ ನಡೆಸಿ, ಸಮುದಾಯ ಆಧಾರಿತ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಸಾರ್ವಜನಿಕ ಸ್ಥಳಗಳ ನಿರ್ವಹಣೆಯ ಉತ್ತಮ ಪದ್ಧತಿಗಳನ್ನು ತಿಳಿದುಕೊಂಡರು. ಈ ಅನುಭವಗಳನ್ನು ಬಿ.ಆರ್. ಹಿಲ್ಸ್ನಲ್ಲಿ ಅಳವಡಿಸಿಕೊಳ್ಳುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ಈ ಸ್ವಚ್ಛತಾ ಶ್ರಮದಾನವನ್ನು ಸ್ವಚ್ಛ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಹಾಗೂ ಎಂ.ಆರ್.ಪಿ.ಎಲ್–ಒಎನ್ಜಿಸಿ ಸಂಸ್ಥೆಯ ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ನೀಡಲಾಗುತ್ತಿರುವ ಸಹಕಾರದೊಂದಿಗೆ ರಾಮಕೃಷ್ಣ ಮಿಷನ್ – ಸ್ವಚ್ಛ ಮಂಗಳೂರು ಅಭಿಯಾನವು ಆಯೋಜಿಸಿತು.



Such a vibe! The games load instantly and I love the variety of options available. braa888 is hands down one of the best platforms I have used recently.