ತಾಜುಲ್ ಉಲಮಾ ಉಳ್ಳಾಲ ತಂಙಳ್ 13ನೇ ಉರೂಸ್ ಸೆ. 11ರಿಂದ 13ರವರೆಗೆ

ಮಂಗಳೂರು: ಸುಮಾರು 65 ವರ್ಷಗಳ ಕಾಲ ಉಳ್ಳಾಲವನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕ ಹಾಗೂ ಕೇರಳದ ಅಹ್ಲುಸ್ಸುನ್ನತಿ ವಲ್ ಜಮಾಅತ್‌ನ ಪ್ರಮುಖ ನಾಯಕರಾಗಿ, ಸಾವಿರಾರು ಉಲಮಾಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ವಿದ್ವತ್ ಕಿರೀಟ, ಆಧ್ಯಾತ್ಮಿಕ ನೇತಾರ ತಾಜುಲ್ ಉಲಮಾ ಶೈಖುನಾ ಉಳ್ಳಾಲ ತಂಙಳ್ (ಖ.ಸಿ.) ಅವರ 13ನೇ ಉರೂಸ್ ಸಮಾರಂಭವು ಸೆಪ್ಟೆಂಬರ್ 11, 12 ಹಾಗೂ 13ರಂದು ಕೇರಳದ ಎಟ್ಟಿಕುಳಂನಲ್ಲಿ ವಿವಿಧ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಉರೂಸ್ ಮಾಧ್ಯಮ ಸಮಿತಿ ಅಧ್ಯಕ್ಷ ತೌಸೀಫ್ ಸಅದಿ ಹರೇಕಳ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 11ರಂದು ಶುಕ್ರವಾರ ಸಂಜೆ 4.30ಕ್ಕೆ ತಾಜುಲ್ ಉಲಮಾ ಅವರ ಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಅವರ ನೇತೃತ್ವದಲ್ಲಿ ಮಖಾಂ ಶರೀಫ್ ಝಿಯಾರತ್ ಹಾಗೂ ಧ್ವಜಾರೋಹಣದೊಂದಿಗೆ ಉರೂಸ್ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ ಎಂದರು.

ಸಂಜೆ 5.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಯ್ಯಿದ್ ಸಾದಾತ್ ತಂಙಳ್ ಉಳ್ತೂರು ವಹಿಸಲಿದ್ದು, ಕೆ.ಪಿ. ಅಬೂಬಕರ್ ಉಸ್ತಾದ್ ಪಟ್ಟುವಂ ಉದ್ಘಾಟಿಸಲಿದ್ದಾರೆ. ಅಬ್ದುಲ್ ಸಲಾಂ ಮುಸ್ಲಿಯಾರ್ ದೇವರ್‌ಶೋಲ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಸೆಪ್ಟೆಂಬರ್ 12ರಂದು ಸಂಜೆ ಸಯ್ಯಿದ್ ಜಲಾಲುದ್ದೀನ್ ತಂಙಳ್ ಪೊಸೋಟ್ ಅವರ ಅಧ್ಯಕ್ಷತೆಯಲ್ಲಿ ತಿದ್ಸ್ಕಾರೆ ಜೀಲಾನಿ ನಡೆಯಲಿದ್ದು, ಡಾ. ಫಾರೂಕ್ ನಯೀಮಿ ಕೊಲ್ಲಂ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಮೂರು ದಿನಗಳ ಉರೂಸ್ ಅಂಗವಾಗಿ ಗ್ರಾಂಡ್ ಬುರ್ದಾ ಮಜ್ಲಿಸ್, ಮೌಲಿದ್ ಮಜ್ಲಿಸ್, ಮಹ್ಲರತುಲ್ ಬದ್ರಿಯಾ, ಜಲಾಲಿಯಾ ರಾತೀಬು, ಪೇರೆಂಟ್ಸ್ ಅಸೆಂಬ್ಲಿ, ಶಾದುಲಿ ಹಳರ, ರಿಫಾಯಿ ರಾತೀಬು, ದಲಾಯಿಲುಲ್ ಖೈರಾತ್ ಖತ್ಮ್, ಜಲ್ಸತುಲ್ ಖಾದಿರಿಯ್ಯ, ಖತಮುಲ್ ಖುರ್‌ಆನ್, ಮದನೀಸ್ ಸಂಗಮ, ಉಲಮಾ ಕಾನ್ಫರೆನ್ಸ್, ಸಾಂಸ್ಕೃತಿಕ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಸನದುದಾನ ಸಮ್ಮೇಳನ

ಸೆಪ್ಟೆಂಬರ್ 13ರಂದು ಸನದುದಾನ ಸಮ್ಮೇಳನ ನಡೆಯಲಿದ್ದು, ತಾಜುಲ್ ಉಲಮಾ ಎಜುಕೇಷನ್ ಸೆಂಟರ್‌ನಲ್ಲಿ ಮುಖ್ತಸರ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ‘ಅಲ್ ಮದನಿ’ ಬಿರುದು ಪ್ರದಾನ ಮಾಡಲಾಗುವುದು.

ಅಂದು ಸಂಜೆ 6 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಖುದ್ವತುಸ್ಸಾದಾತ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ವಹಿಸಲಿದ್ದು, ರಈಸುಲ್ ಉಲಮಾ ಇ. ಸುಲೈಮಾನ್ ಉಸ್ತಾದ್ ಉದ್ಘಾಟಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ಕಡಲುಂಡಿ, ಝೈನುಲ್ ಉಲಮಾ ಮಾಣಿ ಉಸ್ತಾದ್, ಸಯ್ಯಿದ್ ಅಥಾವುಲ್ಲಾ ತಂಙಳ್ ಉದ್ಯಾವರ, ಸಯ್ಯಿದ್ ಶರಫುದ್ದೀನ್ ಜಮಲುಲೈಲಿ ತಂಙಳ್ ಚೇಲಾರಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಕೂಟುಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ಎ.ಪಿ. ಅಬ್ದುಲ್ಲ ಮುಸ್ಲಿಯಾರ್ ಮಾಣಿಕೋತ್, ಕಾವಲ್‌ಕಟ್ಟೆ ಹಝ್ರತ್, ಅಶ್ರಫ್ ತಂಙಳ್ ಆದೂರು, ಅಬ್ದುಲ್ ಖಾದರ್ ಮದನಿ ಕಲ್ತರ, ಹಕೀಮ್ ಅಝ್ಹರಿ, ಕೆ.ಸಿ.ರೋಡ್ ಹುಸೈನ್ ಸಅದಿ, ತೋಕೆ ಮುಹ್ಯುದ್ದೀನ್ ಸಖಾಫಿ, ಕಾಜೂರು ತಂಙಳ್, ಉಜಿರೆ ತಂಙಳ್, ಮಸ್‌ಊದ್ ತಂಙಳ್, ಮುರ ತಂಙಳ್, ಚಟ್ಟೆಕಲ್ ತಂಙಳ್, ಮಲ್ಜಹ್ ತಂಙಳ್, ಮನ್‌ಶರ್ ತಂಙಳ್, ಶರಫುದ್ದೀನ್ ತಂಙಳ್, ತಲೆಕ್ಕಿ ತಂಙಳ್ ಸೇರಿದಂತೆ ಪ್ರಮುಖ ಸಾದಾತುಗಳು, ಉಲಮಾ ಹಾಗೂ ಉಮರಾ ನೇತಾರರು ಭಾಗವಹಿಸಲಿದ್ದಾರೆ.

ಲೋಕಸಭಾ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್, ಸಚಿವ ಯು.ಟಿ. ಖಾದರ್, ಕೇರಳ ವಿಧಾನಸಭಾ ಸದಸ್ಯರಾದ ಕುಂಞ್ಞಿ ಕೃಷ್ಣನ್, ವಿಜಿನ್, ಎಂ. ಆಶ್ರಫ್ ಮಂಜೇಶ್ವರ, ಸಂದೀಪ್ ವಾರಿಯರ್, ಯೆನೆಪೋಯ ಹಾಜಿ ಅಬ್ದುಲ್ಲ ಕುಂಞ್ಞಿ, ಇನಾಯತ್ ಅಲಿ ಮುಲ್ಕಿ, ಡಾ. ಇಫ್ತಿಕಾರ್ ಫರೀದ್, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಖಾದರ್ ಹಾಜಿ ಎಸ್.ಕೆ., ಹನೀಫ್ ಹಾಜಿ ಉಳ್ಳಾಲ, ಮುಸ್ತಫ ಹಾಜಿ ಭಾರತ್, ಶಾಕಿರ್ ಹಾಜಿ, ಅಬೂಬಕರ್ ಹಾಜಿ ರೈಸ್ಕೊ, ಅಡ್ವಕೇಟ್ ಹಂಝತ್ ಹೆಜಮಾಡಿ ಉಡುಪಿ, ಮಲ್ಲೂರು ಸಅದಿ, ಸಾಗರ್ ಮುಹಮ್ಮದ್ ಹಾಜಿ, ಡಾ. ಶೇಕ್ ಬಾವಾ ಹಾಜಿ, ಬಶೀರ್ ಸಅದಿ ಬೆಂಗಳೂರು, ಸುಫಿಯಾನ್ ಸಖಾಫಿ ಮಸ್ದರ್, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಅಶ್‌ಅರಿಯ್ಯ ಸಖಾಫಿ, ಮುಫತ್ತಿಶ್ ಹಮೀದ್ ಮದನಿ, ಕೆ.ಎಂ. ಮೋಂಟುಗೋಳಿ, ಹೈದರ್ ಹಿಮಮಿ ಮಲಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಮೂರು ದಿನಗಳಲ್ಲೂ ಸಾರ್ವಜನಿಕರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ಸ್ವಾಗತ ಸಮಿತಿಯು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಲೀಂ ಕನ್ಯಾಡಿ, ಎಂ.ಎ. ಅಬೂಬಕರ್ ಮುಸ್ಲಿಯಾರ್, ಅಬ್ಬಾಸ್ ಮದನಿ ಬಂಡಾಡಿ, ಬಶೀರ್ ಮದನಿ ಕೂಳೂರು ಹಾಗೂ ನವಾಝ್ ಸಖಾಫಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!