ಮಂಜೇಶ್ವರ: ರಾಜ್ಯದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಪದೇ ಪದೇ ವಿದ್ಯುತ್ ಕಡಿತಗೊಳಿಸುತ್ತಿರುವುದನ್ನು ಖಂಡಿಸಿ ಎಸ್‌ಡಿಪಿಐ (SDPI) ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಹೊಸಂಗಡಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.


ತೀವ್ರ ಸೆಖೆಯ ನಡುವೆ ಹಗಲು-ರಾತ್ರಿ ಎನ್ನದೆ ನಿರಂತರವಾಗಿ ವಿದ್ಯುತ್ ಕೈಕೊಡುತ್ತಿರುವುದರಿಂದ ಮನೆಗಳು, ವ್ಯಾಪಾರ ಸಂಸ್ಥೆಗಳು, ಸಣ್ಣ ಪ್ರಮಾಣದ ಕೈಗಾರಿಕೆಗಳು, ವಿದ್ಯಾರ್ಥಿಗಳು ಹಾಗೂ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಾಯಕರು ಆರೋಪಿಸಿದರು.
ವಿದ್ಯುತ್ ಸರಬರಾಜು ಜಾಲವನ್ನು ಬಲಪಡಿಸಲು ಮತ್ತು ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಲು ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ಶಂಸುದ್ದೀನ್ ಮಂಜೇಶ್ವರ, ಶಬೀರ್ ಪೊಸೋಟು, ಸುಬೈರ್ ಹ್ಯಾರಿಸ್, ಜಕರಿಯ ಉದ್ಯಾವರ, ರಿನಾಸ್ ಹೊಸಂಗಡಿ, ಖಾದರ್ ಫೋಕಸ್, ಮುನೀರ್ ಉದ್ಯಾವರ, ಅಶ್ಫಾಕ್ ಗುಡ್ಡಗೇರಿ, ಇಲ್ಯಾಸ್ ಪಾಂಡಿಯಾಲ್ ಹಾಗೂ ಹಸೈನಾರ್ ಮೋಣುಞಿ ವಹಿಸಿದ್ದರು.

