ಮೂಲ್ಕಿ, ಸೆ:11 ಮಾನವ ಜನ್ಮ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ಭಾರತೀಯರಾದ ನಾವೆಲ್ಲ ನಮ್ಮ ದೇಶದ ಶ್ರೇಷ್ಠ ಸಂತರು ಹಾಕಿಕೊಟ್ಟ ಸಂತ ಪರಂಪರೆಯ ಸಂತ ಪರಂಪರೆಯ ಪಥದಲ್ಲಿ ನಡೆಯಬೇಕು ಎಂದು ಎಂ ಆರ್ ಪುಂಜ, ಐಟಿಐ, ತಪೋವನ ತೋಕೂರು ಇಲ್ಲಿನ ನಿವೃತ್ತ ಪ್ರಾಂಶುಪಾಲರಾದ ಯಶವಂತ ಯೆನ್ ಸಾಲಿಯಾನ್ ತಿಳಿಸಿದರು.ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ ಮತ್ತು ವಿಜಯ ಕಾಲೇಜು ಮುಲ್ಕಿ ಜಂಟಿಯಾಗಿ ಆಯೋಜಿಸಿದ “ಭಾರತದ ಸಂತ ಪರಂಪರೆ” ಉಪನ್ಯಾಸ ಮಾಲಿಕೆ 14 ನ್ನು ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಲತೇಶ್ ಬಾಕ್ರಬೈಲ್ ಮಾತನಾಡಿ,
ಭಾರತದಲ್ಲಿ ಸಾಂಸ್ಕೃತಿಕ ಅಸಮತೋಲನಗಳಾದಾಗ ಯಾರಾದರೂ ಒಬ್ಬ ಮಹಾಪುರುಷ ಅವತರಿಸಿ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಮಹಾನ್ ಕೆಲಸವನ್ನು ನಿರ್ವಹಿಸುತ್ತಾರೆ. ಭಾರತದ ಭವಿಷ್ಯ ನಿರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಯುವ ಜನತೆ ಮಹಾಪುರುಷರ ತತ್ವ ಸಿದ್ಧಾಂತಗಳನ್ನ ಪಾಲಿಸಬೇಕು. ಅದರಂತೆ ಬದುಕಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆ ಆರ್ ಎಂ ಎಸ್ ಎಸ್ ನ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷರಾದ ಡಾ. ಸುಧಾ ಶೆಟ್ಟಿ, ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜಯ ಕಾಲೇಜು ಮುಲ್ಕಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ವೈ.ವಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಜಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ , ಪ್ರೊ. ಅರುಣ್ ಕುಮಾರ್ ಬಿ., ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಸೌಮ್ಯ ಸ್ವಾಗತಿಸಿ, ಡಾ. ದೀಪಿಕ ಕಾರ್ಯಕ್ರಮ ನಿರ್ವಹಿಸಿದರು.

