ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂಗೆ ಎಸ್‌ಐಆರ್ ನೋಟಿಸ್

ಮಂಗಳೂರು:ಹೆಸರಿನಲ್ಲಿ ತಪ್ಪಿದೆ ಎಂದು ದಕ್ಷಿಣ ಕನ್ನಡದ ನಿವೃತ್ತ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂಗೆ ಎಸ್‌ಐಆ‌ರ್ ನೋಟಿಸ್‌ ನೀಡಿದೆ.

ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಡಿ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ. ಹೆಸರಿನಲ್ಲಿ ತಪ್ಪಿದೆ ಎಂದು ನೋಟಿಸ್‌ ನೀಡಿದ್ದು ಸೆ.29ರಂದು ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ಇಬ್ರಾಹಿಂ ಅವರು ತನಗೆ ನೋಟಿಸ್ ನೀಡಿರುವುದನ್ನು ಆಕ್ಷೇಪಿಸಿ, ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ನರಸಿಂಹರಾಜಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ಅವರ ಹೆಸರಿನಲ್ಲಿ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ವ್ಯತ್ಯಾಸ ಸರಿಪಡಿಸಲು ಈ ನೋಟಿಸ್ ನೀಡಲಾಗಿದೆ. ನೋಟಿಸ್ ನಲ್ಲಿ ನಿಮ್ಮ ಹೆಸರು ಹಿಂದೆ ಇರುವ ಮತದಾರ ಪಟ್ಟಿಯಲ್ಲಿ ಬೇರೆ ಇದ್ದು ಈಗ ಕೊಟ್ಟಿರುವುದರಲ್ಲಿ ವ್ಯತ್ಯಾಸ ಇದೆ. ಹೀಗಾಗಿ ಅದನ್ನು ಸಾಬೀತುಪಡಿಸಲು ಇತರೇ ದಾಖಲೆ ಸಹಿತ ಸೂಚಿಸಿದ ದಿನಾಂಕದಂದು ಹಾಜರಾಗಬೇಕು. ಅಥವಾ ಸ್ಥಳೀಯ ಬಿಎಲ್‌ಓ ಅವರನ್ನು ಸಂಪರ್ಕಿಸಬಹುದೆಂದು ಅವರ ನಂಬರ್ ಕೊಡಲಾಗಿದೆ.

ನಿವೃತ್ತ ಅಧಿಕಾರಿ ಮತ್ತು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ತನಗೆ ನೋಟಿಸ್ ನೀಡಿರುವುದಕ್ಕೆ ಎ.ಬಿ. ಇಬ್ರಾಹಿಂ ಅವರು ತೀವ್ರ ಅಸಮಾಧಾನ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗ ನೀಡುತ್ತಿರುವ ಎಸ್‌ಐಆರ್ (SIR) ನೋಟಿಸ್‌ನಲ್ಲಿರುವ ಕೆಲವು ಕಠಿಣ ಸೂಚನೆಗಳು ಮತ್ತು “ತಪ್ಪು ಮಾಹಿತಿ ನೀಡಿದರೆ ಜೈಲು ಶಿಕ್ಷೆ ವಿಧಿಸಲಾಗುವುದು” ಎಂಬಂತಹ ಎಚ್ಚರಿಕೆಗಳು ಸಾಮಾನ್ಯ ಜನರಲ್ಲಿ ಅನಗತ್ಯ ಭಯದ ವಾತಾವರಣ ಸೃಷ್ಟಿಸುತ್ತವೆ ಎಂದು ಅವರು ಹೇಳಿದ್ದಾರೆ.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೂ ಹೆಸರಿನ ವ್ಯತ್ಯಾಸದ ಕಾರಣಕ್ಕೆ ಇತ್ತೀಚೆಗೆ ಎಸ್‌ಐಆರ್ ನೋಟಿಸ್ ನೀಡಿ, ಅನಂತರ ಸುದ್ದಿಯಾಗುತ್ತಿದ್ದಂತೆ ಅದನ್ನು ಹಿಪಡೆಯಲಾಗಿತ್ತು ಎಂಬುದನ್ನು ಇಲ್ಲಿ ಸ್ನರಿಸಬಹುದು.

SHARE
Loading spinner

Leave a Reply

Your email address will not be published. Required fields are marked *

error: Content is protected !!