ಕಾಸರಗೋಡು :ಕಾಸರಗೋಡಿನ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅವರು ನಿರ್ಗಮಿತ ಡಿಸಿ ಅರ್ಜುನ್ ಪಾಂಡ್ಯನ್ ಅವರಿಂದ ಬುಧವಾರ ಅಧಿಕಾರ ವಹಿಸಿಕೊಂಡರು.

ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಮ್ಸ್ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವಿಗೆ ಬದ್ಧರಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಪ್ತಭಾಷಾ ಸಂಗಮ ಕ್ಷೇತ್ರ ಹಾಗೂ ಕರ್ನಾಟಕ ಗಡಿಭಾಗವಾದ ಕಾಸರಗೋಡಿನಲ್ಲಿ ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ.

ಸೂಕ್ತ ಪರಿಶೀಲನೆ ನಡೆಸಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುವುದು. ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲಾ ವರ್ಗದ ಜನರ ಸಹಕಾರ ಅಗತ್ಯ ಎಂದು ಅವರು ಕೋರಿದರು.


Finally found a site that works perfectly on my mobile phone. The loading times are minimal and the wins feel rewarding. Big shoutout to ph3655ph.