ಕುಬಣೂರು: ಕುಬಣೂರು ಶ್ರೀ ಪಿಲಿಚಾಮುಂಡಿ, ರಕ್ತೇಶ್ವರಿ ಹಾಗೂ ಗುಳಿಗ ದೈವಸ್ಥಾನದಲ್ಲಿ ಸೆ.20ರಂದು ಸಮಿತಿ ಮಹಾಸಭೆ ನಡೆಯಿತು.


ಮಹಾಸಭೆಯಲ್ಲಿ ಜ.26ರಂದು ನಡೆಯಲಿರುವ ವರ್ಷಾವಧಿ ನೇಮದ ಸಿದ್ಧತೆಗಳ ಕುರಿತು ಚರ್ಚಿಸಲಾಯಿತು. ಅಲ್ಲದೆ, ಆನೆಚಪ್ಪರಕ್ಕೆ ನಾಲ್ಕು ಶಾಶ್ವತ ಕಂಬಗಳ ನಿರ್ಮಾಣ ಸೇರಿದಂತೆ ದೈವಸ್ಥಾನದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

ಸಭೆಯಲ್ಲಿ ಕುಬಣೂರಾಯ ಕುಟುಂಬಸ್ಥರು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

