ಹೊಸದಿಲ್ಲಿ:ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.

ಸ್ವಾಮೀಜಿಯವರನ್ನು ಆದರದಿಂದ ಬರಮಾಡಿಕೊಂಡ ಪ್ರಧಾನಿಯವರು ಉಭಯ ಕುಶಲೋಪರಿ ನಡೆಸಿದರು. ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವವು 2031 ರಲ್ಲಿ ನಡೆಯಲಿದೆ. ಈ ಬಗ್ಗೆ ಪಂಚವಾರ್ಷಿಕ ಯೋಜನೆಯನ್ನು ಶ್ರೀಗಳು ಹಮ್ಮಿಕೊಂಡಿದ್ದು ಅದರ ಲಾಂಛನವನ್ನು ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದರು.

ಪ್ರಧಾನಮಂತ್ರಿಯವರನ್ನು ಯಕ್ಷಗಾನದ ರಾಜಕಿರೀಟ ತೊಡಿಸಿ ಶಾಲು , ಸ್ವರ್ಣ ಲೇಪಿತ ಕಾಲೀಯ ಕೃಷ್ಣನ ಪ್ರತಿಮೆ ಸಹಿತ ಫಲ ಮಂತ್ರಾಕ್ಷತೆ ನೀಡಿ ಸ್ವಾಮೀಜಿಯವರು ಸಂಮಾನಿಸಿದರು. ಇದೇ ಸಂದರ್ಭ ಕಳೆದ ವಾರ ಮೋದೀಜೀಯವರ ಜನ್ಮದಿನದಂದು ಅವರ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ ಅವರ ಹೆಸರು ಗೋತ್ರ ನಕ್ಷತ್ರ ರಾಶಿಯಲ್ಲಿ ಸಂಕಲ್ಪ ನೆರವೇರಿಸಿ ವೇದವ್ಯಾಸ ಗುರುಕುಲದಲ್ಲಿ ಪೂರ್ಣ ನವಗ್ರಹ ಹೋಮ , ಹಾಗೂ ರಾಷ್ಟ್ರಸೂಕ್ತ ಹೋಮ ನಡೆಸಲಾಗಿತ್ತು .ಅದರ ಪ್ರಸಾದವನ್ನೂ ಸ್ವಾಮೀಜಿಯವರು ನೀಡಿ ಶುಭ ಕೋರಿದರು.


