ಸಾಮಾಜಿಕ ಜಾಲತಾಣಗಳಲ್ಲಿ blinkit ಮುಖಾಂತರ ಖರೀದಿಸಲಾದ ನಂದಿನಿ ಬ್ರಾಂಡ್ ನ ಪನೀರ್ 200 ಗ್ರಾಂ ಪಾಕೆಟ್ ಗಳಲ್ಲಿ ಶೆಲ್ಫ್ ಲೈಫ್ ಒಂದು ವರ್ಷ ಇರುವುದಾಗಿ ಮಾಹಿತಿ ಹರಿದಾಡುತಿದ್ದು ಮಂಗಳೂರಿನ ಬಿಜೈ ನಲ್ಲಿರುವ ಬ್ಲಿಂಕಿಟ್ ಆನ್ಲೈನ್ ಪ್ಲಾಟ್ ಫಾರ್ಮ್ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಗೋದಾಮಿನಲ್ಲಿದ್ದ ಎಲ್ಲಾ ನಂದಿನಿ ಪನೀರ್ 200 ಗ್ರಾಂ ಒಂದು ತಿಂಗಳ ಶೆಲ್ಫ್ ಲೈಫ್ ಮಾತ್ರ ಇರುವುದು ಕಂಡುಬಂದಿರುತ್ತದೆ.
ತಯಾರಿಕಾ ದಿನಾಂಕವನ್ನು ಲೇಸರ್ ಪ್ರಿಂಟಿನ ಮೂಲಕ ಚುಕ್ಕಿಗಳಲ್ಲಿ ನಮೂದಿಸಿರುವುದರಿಂದ 2026 ಇಸವಿ 2025 ಎಂಬುದಾಗಿ ಭಾಸವಾಗುತ್ತಿದೆ.
ಗೌರವಾನ್ವಿತ ಆರೋಗ್ಯ ಸಚಿವರಾದ ಯುಟಿ ಖಾದರ್ ಹಾಗೂ ಮಾನ್ಯ ಆಹಾರ ಸುರಕ್ಷತಾ ಆಯುಕ್ತರಾದ ಶ್ರೀ ಶ್ರೀನಿವಾಸ್ ರವರ ಆದೇಶದಂತೆ ಬಿಜೈ ನಲ್ಲಿರುವ ಬ್ಲಿಂ ಕಿಟ್ ಮಳಿಗೆಗೆ ಭೇಟಿ ಪರಿಶೀಲಿಸಲಾಯಿತು.


