

ಪುತ್ತೂರು : SKJM ಕೂರ್ನಡ್ಕ ರೇಂಜ್ ಆಶ್ರಯದಲ್ಲಿ ಸವನೂರಿನಲ್ಲಿ ನಡೆದ ಮದ್ರಸ ವಿದ್ಯಾರ್ಥಿಗಳ “ಮುಸಾಬಕ” ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ವೀರಮಂಗಲ ಕಮರುಲ್ ಇಸ್ಲಾಂ ಮದ್ರಸ ಐದನೇ ಸ್ಥಾನ ಪಡೆದು, ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಸಿನಾನ್, ಆಶಿಕ್,ಫರ್ಹಾನ್, ಝಾಹಿದ್ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಝಾಹಿದ್ ಇವರಿಗೆ ಸೀನಿಯರ್ ವಿಭಾಗದಲ್ಲಿ ಕಲಾ ಪ್ರತಿಭೆ ಪ್ರಶಸ್ತಿ ಲಭಿಸಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಮದ್ರಸ ಆಡಳಿತ ಮಂಡಳಿ, ಅಧ್ಯಾಪಕರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.


