ಮಂಜೇಶ್ವರ:ಆಧುನಿಕ-ಇಸ್ಲಾಮಿಕ್ ಶಿಕ್ಷಣದ ಕ್ರಾಂತಿ: ಮರಿಯಂ ಅಲ್ಬಿರ್ ಇಂಟರ್‌ನ್ಯಾಷನಲ್ ಶಾಲೆಯ ನೂತನ ಕಟ್ಟಡ ಲೋಕಾರ್ಪಣೆ

ಮಂಜೇಶ್ವರ: 2023 ರಲ್ಲಿ ಆರಂಭಗೊಂಡು ಅತ್ಯಲ್ಪ ಸಮಯದಲ್ಲೇ ಮನೆಮಾತಾಗಿರುವ ಮರಿಯಂ ಅಲ್ಬಿರ್ ಇಂಟರ್‌ನ್ಯಾಷನಲ್ ಶಾಲೆ, ಈಗ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡಕ್ಕೆ ಪಾದಾರ್ಪಣೆಗೊಂಡಿತು.

ಆಧುನಿಕ ಶಿಕ್ಷಣದ ಜೊತೆಗೆ ಇಸ್ಲಾಮಿಕ್ ಮೌಲ್ಯಗಳನ್ನು ಸಮ್ಮಿಳನಗೊಳಿಸಿ ಮಕ್ಕಳ ಬೌದ್ಧಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಈ ಸಂಸ್ಥೆಯು ಕರ್ನಾಟಕ, ಕೇರಳ ಮತ್ತು ಗಲ್ಫ್ ದೇಶಗಳಲ್ಲಿ ನೂರಾರು ಶಾಖೆಗಳನ್ನು ಹೊಂದಿರುವ ಅಲ್ಬಿರ್ ವಿದ್ಯಾಸಂಸ್ಥೆ
ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ವಿಭಾಗಗಳಲ್ಲಿ ವಿಶೇಷ ಆಸಕ್ತಿ ವಹಿಸುತ್ತಿದ್ದು, ಕುರಾನ್ ಅಧ್ಯಯನ ಹಾಗೂ ಇಂಗ್ಲಿಷ್-ಅರೇಬಿಕ್ ಭಾಷಾ ಪ್ರವೀಣತೆಗೆ ಆದ್ಯತೆ ನೀಡುತ್ತಿದೆ.

ಕಣ್ವತೀರ್ಥ ರಸ್ತೆಯ 3ನೇ ಕ್ರಾಸ್ ಬೀಚ್ ರಸ್ತೆಗೆ ತಾಗಿಕೊಂಡಿರುವ ಮರಿಯಂ ನಗರದಲ್ಲಿ ಗುರುವಾರದಂದು ಸಂಜೆ ಮರಿಯಂ ಅಲ್ಬಿರ್ ಇಂಟರ್‌ನ್ಯಾಷನಲ್ ಶಾಲೆಯ ನೂತನ ‘ಗ್ರೌಂಡ್ ಫ್ಲೋರ್’ ಉದ್ಘಾಟನಾ ಸಮಾರಂಭವು ಬಹಳ ಅದ್ದೂರಿಯಾಗಿ ನೆರವೇರಿತು. ಸಯ್ಯಿದ್ ಅತ್ತಾವುಲ್ಲಾ ತಂಘಲ್ ಎಂ.ಎ ಪ್ರಾರ್ಥನೆ ನೆರವೇರಿಸಿದರು.

ಸಮಾರಂಭದಲ್ಲಿ ಎಂಎಐಎಸ್ಎಂ ಹಾಗೂ ಎನ್ ಎಚ್ ಐ ಸಿ ಅಧ್ಯಕ್ಷ ಇಬ್ರಾಹಿಂ ಉಮರ್ ಹಾಜಿ ಸಮಾರಂಭಕ್ಕೆ ಆಗಮಿಸಿದವರೆಲ್ಲರನ್ನೂ ಸ್ವಾಗತಿಸಿದರು.

ಬಳಿಕ ಸಯ್ಯಿದ್ ಯಹ್ಯಾ ತಂಘಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಘಲ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಅದೇ ರೀತಿ ಕಟ್ಟಡದ ವಿವಿಧ ಕೊಠಡಿಗಳನ್ನು ಕೂಡಾ ಶಾಸಕರು ಸೇರಿದಂತೆ ವಿವಿಧ ಗಣ್ಯರು ಉದ್ಘಾಟಿಸಿದರು.

ಕಟ್ಟಡ ಲೋಕಾರ್ಪಣೆಗೊಳಿಸಿದ ಸಯ್ಯದ್ ಮೊಹಮ್ಮದ್ ಜಿಪ್ರಿ ಮುತ್ತು ಕೋಯ ತಂಘಲ್ ಮಾತನಾಡಿ ( Byt 1) : ಆಧುನಿಕ ಶೈಕ್ಷಣಿಕ ಮೌಲ್ಯಗಳೊಂದಿಗೆ ಇಸ್ಲಾಮಿಕ್ ಸಂಸ್ಕೃತಿ ಮತ್ತು ನೈತಿಕ ಶಿಕ್ಷಣವನ್ನು ಸಮ್ಮಿಳನಗೊಳಿಸಿ ನೀಡುತ್ತಿರುವ ಈ ಸಂಸ್ಥೆಯು ಮಕ್ಕಳ ಉಜ್ವಲ ಭವಿಷ್ಯಕ್ಕೆ ಉತ್ತಮ ಬುನಾದಿಯಾಗಿದೆ. ನೂತನ ಕಟ್ಟಡದ ಅತ್ಯಾಧುನಿಕ ಸೌಲಭ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಜ್ಜೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಬಳಿಕ ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಮಾತನಾಡಿ ( Byt 2) : ಈ ಶಿಕ್ಷಣ ಸಂಸ್ಥೆಗೆ ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ ಭವ್ಯ ಕಟ್ಟಡ ನಿರ್ಮಾಣಕ್ಕೆ ಹಾಗೂ ಸಂಸ್ಥೆಯ ಬೆಳವಣಿಗೆಗೆ ಆರ್ಥಿಕ ಮತ್ತು ಭೌತಿಕವಾಗಿ ಧನಸಹಾಯ ನೀಡಿ ಸಹಕರಿಸಿದ ಡಾ. ಯು ಎಂ ಇಕ್ಬಾಲ್ ರನ್ನು ಅಭಿನಂದಿಸಿದ ಶಾಸಕರು ನಾಡಿಗೆ ಸುಸಂಸ್ಕೃತ, ಜ್ಞಾನವಂತ ಪ್ರಜೆಗಳನ್ನು ಕೊಡುಗೆಯಾಗಿ ನೀಡುವ ಇಂತಹ ಸಂಸ್ಥೆಗಳಿಗೆ ಎಲ್ಲ ರೀತಿಯ ಬೆಂಬಲ ಮತ್ತು ಸಹಕಾರ ಸದಾ ಇರುತ್ತದೆ ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.

ಬಳಿಕ ಡಾ. ಯು ಎಂ ಇಕ್ಬಾಲ್ ರವರು ಮಾತನಾಡಿ (Byt 3) ನಾನು ಹೊರಗಿನವನೇನೂ ಅಲ್ಲ ಇದೇ ಮಂಜೇಶ್ವರದಲ್ಲಿ ಕಲಿತು ಬೆಳೆದವನು ನನ್ನ ನಾಡಿನ ಮೇಲೆ ನನಗೆ ಅತಿಯಾದ ಗೌರವ ಇದೆ. ನಮ್ಮ ಸಮಾಜದ ಮುಂದಿನ ಪೀಳಿಗೆಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿ ಸಮಾರಂಭಕ್ಕೆ ಶುಭ ಹಾರೈಸಿದರು.

ಈ ಶಾಲೆಯಲ್ಲಿ ಇದೀಗ ಎರಡನೇ ತರಗತಿ ತನಕ ಸುಮಾರು 92 ವಿದ್ಯಾರ್ಥಿಗಳು ಕಲಿಯುತಿದ್ದಾರೆ. ಈಗಾಗಲೇ ಬಹುತೇಕ ಸೌಕರ್ಯಗಳನ್ನು ಹೊಂದಿರುವ ಈ ಶಾಲೆಯಲ್ಲಿ ಮುಂದಿನ ದಿನಗಳಲ್ಲಿ ಆಟದ ಆಧಾರಿತ ಕಲಿಕೆ, ಸ್ಮಾರ್ಟ್ ತರಗತಿಗಳು, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಹಾಗೂ ‘ಕಿಡ್ಸ್ ಫೆಸ್ಟ್’ ನಂತಹ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸುವುದರೊಂದಿಗೆ ಸುರಕ್ಷಿತ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಈ ಶಾಲೆಯನ್ನು ನೂತನ ಕಟ್ಟಡದೊಂದಿಗೆ ಹೊಸ ಮೈಲಿಗಲ್ಲು ಸ್ಥಾಪಿಸುವ ಉದ್ದೇಶವನ್ನು ಇಟ್ಟು ಕೊಂಡಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಬಿರ್ ಶಾಲಾ ಅಡ್ಮಿನಿಸ್ಟ್ರೇಟಿವ್ ಡೈರೆಕ್ಟರ್ ಡಾ. ಕೆ.ಪಿ. ಮುಹಮ್ಮದ್, ಅನ್ಸಾರ್ ತಂಘಲ್, ಪಂಚಾಯತು ಅಧ್ಯಕ್ಷ ಬಶೀರ್ ಕನಿಲ, ಶೆರೀಫ್ ಪಾವೂರು, ಇಬ್ರಾಹಿಂ ಬಟರ್ ಫ್ಲೈ ಆರ್ ಕೆ ಬಾವ ಹಾಜಿ, ಫಾರೂಕ್ ಹಾಜಿ, ಹನೀಫ್ ಪಡಿಇಾರ್, ಅಹ್ಮದ್ ನಝೀರ್, ಶಂಶುದ್ದೀನ್, ಸಲ್ಮಾನ್ ಫಾರಿಸ್ ಯಮಾನಿ, ಹಾರಿಸ್ ಮಿಸ್ಬಾಯಿ ಅದೇ ರೀತಿ ವಿವಿಧ ಸಂಘಟನೆಗಳ ನೇತಾರರು, ಸಮಾಜ ಸೇವಕರು ಪೋಷಕರು ಹಲವು ಗಣ್ಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡರು.

SHARE
Loading spinner

Leave a Reply

Your email address will not be published. Required fields are marked *

error: Content is protected !!