ತೆಮರ್ ಅಬ್ದುಲ್ಲಾ ಮೆಮೋರಿಯಲ್ ಫೌಂಡೇಶನ್‌ನಿಂದ ಪೆರ್ಲದ ಸಾಂತ್ವನ ಬಡ್ಸ್ ಶಾಲೆಗೆ ಕಂಪ್ಯೂಟರ್ ಹಾಗೂ ಕಲಿಕೋಪಕರಣ ವಿತರಣೆ

ಪೆರ್ಲ: ತೆಮರ್ ಅಬ್ದುಲ್ಲಾ ಮೆಮೋರಿಯಲ್ ಫೌಂಡೇಶನ್ ವತಿಯಿಂದ ಎಣ್ಮಕಜೆ ಸಾಂತ್ವನ ಬಡ್ಸ್ ಎಂ.ಸಿ.ಆರ್.ಸಿ. ಶಾಲೆಗೆ ಅಗತ್ಯವಿರುವ ಕಂಪ್ಯೂಟರ್ ಹಾಗೂ ವಿವಿಧ ಕಲಿಕೋಪಕರಣಗಳನ್ನು ವಿತರಿಸಲಾಯಿತು.

ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿಶೇಷ ಅಗತ್ಯವಿರುವ ಮಕ್ಕಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ. ಮಕ್ಕಳ ಶಿಕ್ಷಣ ಹಾಗೂ ಪ್ರತಿಭಾ ವಿಕಾಸಕ್ಕೆ ತಂತ್ರಜ್ಞಾನ ಆಧಾರಿತ ಕಲಿಕೋಪಕರಣಗಳು ಹೆಚ್ಚಿನ ನೆರವು ನೀಡಲಿವೆ ಎಂದು ಹೇಳಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಿದ್ದೀಕ್ ವಳಮೊಗರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಂತ್ವನ ಬಡ್ಸ್ ಶಾಲೆಯ ಮಕ್ಕಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಮಾಜದ ವಿವಿಧ ಸಂಘಟನೆಗಳು ಹಾಗೂ ಸಂಸ್ಥೆಗಳು ಕೈಜೋಡಿಸಬೇಕು. ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ರಮ್ಲ, ವಿಜಯ ಹಾಗೂ ಪಂಚಾಯತ್ ಸದಸ್ಯರಾದ ಆಯಿಷಾ ಎ.ಎ., ಸೌದಾಭಿ ಹನೀಫ್, ಆಯಿಷಾತ್ ರಾಭಿಯ, ಜಗದೀಶ, ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಮಜೀದ್ ಮೊದಲಾದವರು ಮಾತನಾಡಿ, ಶಾಲೆಗೆ ಕಂಪ್ಯೂಟರ್ ಹಾಗೂ ಕಲಿಕೋಪಕರಣಗಳನ್ನು ಒದಗಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಿರುವ ತೆಮರ್ ಅಬ್ದುಲ್ಲಾ ಮೆಮೋರಿಯಲ್ ಫೌಂಡೇಶನ್‌ನ ಸೇವೆಯನ್ನು ಶ್ಲಾಘಿಸಿದರು.

ತೆಮರ್ ಅಬ್ದುಲ್ಲಾ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ಇಬ್ರಾಹಿಂ ಮುಂಡಿತ್ತಡ್ಕ ಮಾತನಾಡಿ, ಸಮಾಜದ ಹಿಂದುಳಿದ ಹಾಗೂ ವಿಶೇಷ ಅಗತ್ಯವಿರುವ ಮಕ್ಕಳಿಗೆ ಶಿಕ್ಷಣದ ಅವಕಾಶಗಳು ಇನ್ನಷ್ಟು ಸುಲಭವಾಗಿ ದೊರೆಯಬೇಕು ಎಂಬ ಉದ್ದೇಶದಿಂದ ಸಂಸ್ಥೆ ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಸಾಂತ್ವನ ಬಡ್ಸ್ ಶಾಲೆಯ ಹೆತ್ತವರ ಜೀವನೋಪಾಯದ ಸುಭದ್ರತೆಗಾಗಿ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ಪಂಚಾಯತ್ ಕಾರ್ಯದರ್ಶಿ ಶುಕೂರ್ ಟಿ., ಅಸಿಸ್ಟೆಂಟ್ ಸೆಕ್ರೆಟರಿ ಗಿರೀಶ್ ಟಿ., ಸಿಡಿಎಸ್ ಅಧ್ಯಕ್ಷೆ ನವೀನ ಕುಮಾರಿ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಮಾಯಿಲ ನಾಯ್ಕ್, ಸತ್ಯನಾರಾಯಣ ಭಟ್, ಹರೀಶ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.ಮಧ್ಯಾಹ್ನ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು

ಶಾಲಾ ಪ್ರಾಂಶುಪಾಲೆ ಮರಿಯಾಂಬಿ ಸ್ವಾಗತಿಸಿದರು. ಜ್ಯೋತಿ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!