ಕುಂಬಳೆ : ಶಿರಿಯ ಹೊಳೆಯಿಂದ ಕಾನೂನುಬಾಹಿರವಾಗಿ ಮರಳು ಸಾಗಿಸುತ್ತಿದ್ದ ಜಾಲದ ವಿರುದ್ಧ ಎಎಸ್‌ಪಿ ಅಚ್ಯುತ್ ಅಶೋಕ್ ನೇತೃತ್ವದ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.ಬಂಧಿತರನ್ನು ಪಾವೂರಿನ ಚಾಲಕ ಮುಹಮ್ಮದ್ ಅಶ್ರಫ್ ಹಾಗೂ ಟಿಪ್ಪರ್ ಲಾರಿ ಮಾಲಕ ಉಪ್ಪಳದ ಮೋಹನ್ ಶಿರಾಸ್ ಎಂದು ಗುರುತಿಸಲಾಗಿದೆ.

ಕೈಕಂಬದಿಂದ ಪೈವಳಿಕೆ ಕಡೆಗೆ ತೆರಳುತ್ತಿದ್ದ ಮರಳು ಲಾರಿಯನ್ನು ತಪಾಸಣೆ ವೇಳೆ ತಡೆದಾಗ, ಚಾಲಕ ಅಶ್ರಫ್ ಓಡಿಹೋಗಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಲಾರಿಗೆ ಬೆಂಗಾವಲಾಗಿ ಬೈಕ್‌ನಲ್ಲಿ ಬರುತ್ತಿದ್ದ ಮಾಲಕ ಮೋಹಿನ್ ಶಿರಾಸ್ ಕೂಡ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.ಬೈಕ್ ಮತ್ತು ಲಾರಿಯನ್ನು ಜಪ್ತಿ ಮಾಡಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ ರಿಮಾಂಡ್ ವಿಧಿಸಿದೆ.


