ಅಕ್ಟೋಬರ್ 17ರಂದು ಮಂಜೇಶ್ವರ ಪಿಲಿಗೊಬ್ಬು ಸೀಸನ್ 3

ಇದೇ ಮೊದಲ ಬಾರಿಗೆ ಪುಟಾಣಿ ಮಕ್ಕಳಿಗಾಗಿ ‘ಮಂಜೇಶ್ವರ ಕಿನ್ನಿ ಪಿಲಿ’ ಸ್ಪರ್ಧೆ

ಮಂಜೇಶ್ವರ: ನಮ್ಮ ಮೀಡಿಯಾ 24*7ರ ಸಾರಥ್ಯದಲ್ಲಿ, ಕೊಂಡೆವೂರು ಶ್ರೀ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಕಾಸರಗೋಡು ಜಿಲ್ಲೆಯ ಯಶಸ್ವಿ ಹಾಗೂ ಅದ್ದೂರಿ ಹುಲಿವೇಷ ಸ್ಪರ್ಧೆ “ಮಂಜೇಶ್ವರ ಪಿಲಿಗೊಬ್ಬು” ಸೀಸನ್ 3 ಇದೇ ಬರುವ ಅಕ್ಟೋಬರ್ 17ರಂದು ಉದ್ಯಾವರ ಮಾಡ ಮೈದಾನದಲ್ಲಿ ಆಯೋಜಿಸಲಾಗಿದೆ.

ಈ ಬಾರಿ ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪುಟಾಣಿ ಮಕ್ಕಳಿಗಾಗಿ “ಮಂಜೇಶ್ವರ ಕಿನ್ನಿ ಪಿಲಿ” ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. 2ರಿಂದ 5 ವರ್ಷ ಹಾಗೂ 6ರಿಂದ 8 ವರ್ಷ ವಯೋಮಿತಿಯ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ.

oplus_0

ಸ್ಪರ್ಧೆಯ ಅಂಗವಾಗಿ ಶನಿವಾರ ಬಂಗ್ರಮಂಜೇಶ್ವರ ಕನಿಲ ಭಂಡಾರ ಮನೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಉದ್ಯಾವರ ಮಾಡ ಕ್ಷೇತ್ರದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ , ಉದ್ಯಾವರ ಮಾಡದ ಅರ್ಚಕರು ಶ್ರೀ ಬೀರು ಚೌಟರು, ಉದ್ಯಾವರ ಮಾಡದ ಅಣ್ಣದೈವದ ಪಾತ್ರಿ ಶ್ರೀ ರಾಜ ಬೆಳ್ಚಪ್ಪಾಡರು, , ತಮ್ಮ ದೈವದ ಪಾತ್ರಿ ಶ್ರೀ ತಿಮಿರಿ ಬೆಳ್ಚಪ್ಪಾಡರು,, ಉದ್ಯಾವರ ಮಾಡದ ‘ಶ್ರೀ ಮುಂಡತ್ತಾಯ ದೈವದ ಪಾತ್ರಿ’, ಶ್ರೀ ಮಂಜು ಬೆಳ್ಚಪ್ಪಾಡರು,, ಕನಿಲ ಶ್ರೀ ಭಗವತಿ ಕ್ಷೇತ್ರ ದ ಮಂಜಪ್ಪ ಕಾರ್ನವರು, ಕೃಷ್ಣ ಶಿವ ಕೃಪಾ ಕುಂಜತ್ತೂರು, ಅಡ್ವಕೇಟ್ ನವೀನ್ ರಾಜ್, ಹರೀಶ್ ಶೆಟ್ಟಿ ಮಾಡ, ದಿನಕರ್ ಹೊಸಂಗಡಿ, ದೇವರಾಜ್ ಹೊಸಂಗಡಿ, ಅದ್ವಿತೀ ಕ್ಯಾಟರಿಂಗ್‌ನ ಮಾಲಕರಾದ ನಿರಂಜನ್, ನಮ್ಮ ಮೀಡಿಯಾ ವಾಹಿನಿಯ ಮಾಲಕರಾದ ಜಗದೀಶ್ ಮಡಿವಾಳ್, ಕಾರ್ಯಕ್ರಮ ಆಯೋಜನಾ ಸಮಿತಿಯ ಪ್ರಮುಖರಾದ ವಿ.ಎಸ್. ಪ್ರೊಡಕ್ಷನ್‌ನ ಹಿತೇಶ್ ಆಚಾರ್ಯ, ಜಿಜೆ ಕ್ಯಾಪ್ಚರ್ ಕ್ರಿಯೇಷನ್ ನ ಗುರುರಾಜ್ ಆಚಾರ್ಯ, , ಸ್ಪರ್ಧೆಯಲ್ಲಿ ಭಾಗವಹಿಸಲಿರುವ ತಂಡಗಳ ಪ್ರತಿನಿಧಿಗಳು, ನಮ್ಮ ಮೀಡಿಯಾ ವಾಹಿನಿಯ ಸದಸ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಕಳೆದ ಎರಡು ಆವೃತ್ತಿಗಳ ಯಶಸ್ಸಿನ ಬಳಿಕ ಈ ಬಾರಿ ಮಂಜೇಶ್ವರ ಪಿಲಿಗೊಬ್ಬು ಸೀಸನ್ 3 ಮತ್ತಷ್ಟು ಅದ್ದೂರಿಯಾಗಿ ನಡೆಯಲಿದ್ದು, ಕಾಸರಗೋಡು ಜಿಲ್ಲೆಯ ಜನರ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಪುಟಾಣಿ ಮಕ್ಕಳಿಗಾಗಿ ಆಯೋಜಿಸಲಾಗುತ್ತಿರುವ “ಮಂಜೇಶ್ವರ ಕಿನ್ನಿ ಪಿಲಿ” ಸ್ಪರ್ಧೆ ಈ ಬಾರಿಯ ಪ್ರಮುಖ ಆಕರ್ಷಣೆಯಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!