ಪೆರಿಂಗಡಿ ಕರಾವಳಿತೀರದಲ್ಲಿ ಕಡಲ್ಕೊರೆತ; ಮನೆಗಳಿಗೆ ಜಲಸಮಾಧಿ ಭೀತಿ

​ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಪೆರಿಂಗಡಿ ಕರಾವಳಿ ತೀರದಲ್ಲಿ ಕಳೆದ ಒಂದು ವಾರದಿಂದ ಕಡಲ್ಕೊರೆತ ಭೀಕರ ಸ್ವರೂಪ ಪಡೆದಿದ್ದು, ರಸ್ತೆ ಹಾಗೂ ಮೈದಾನಗಳು ಈಗಾಗಲೇ ಸಮುದ್ರಪಾಲಾಗಿವೆ.

​ಕಳೆದ ವರ್ಷವೇ ಪೆರಿಂಗಡಿ-ಮುಟ್ಟಂಗೇಟ್ ತೀರದ ರಸ್ತೆ ಕೊಚ್ಚಿಹೋಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಅಲೆಗಳ ಆರ್ಭಟಕ್ಕೆ ಹಿಂದೆ ಹಾಕಲಾಗಿದ್ದ ಮರಳು ಚೀಲಗಳೂ ಕೊಚ್ಚಿಹೋಗುತ್ತಿದ್ದು, ತೀರದ ಕುಟುಂಬಗಳು ತೀವ್ರ ಆತಂಕದಲ್ಲಿ ದಿನ ದೂಡುವಂತಾಗಿದೆ.

​ಅಲೆಗಳ ರಭಸ ಹೀಗೆಯೇ ಮುಂದುವರಿದಲ್ಲಿ ಅಪಾಯದ ಅಂಚಿನಲ್ಲಿರುವ ಮನೆಗಳು ಜಲಸಮಾಧಿಯಾಗುವ ಭೀತಿಯಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆಡಳಿತ ವರ್ಗ ತಕ್ಷಣವೇ ಶಾಶ್ವತ ಕಡಲ್ಕೊರೆತ ತಡೆಗೋಡೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!