ಪೆರ್ಲ ಕೆಳಗಿನ ಪೇಟೆಯ ಬಜಕೂಡ್ಲು ಸಮೀಪ ಹಾಡಹಗಲೇ ಅಂಗಡಿಗೆ ಕನ್ನ; ನಗದು ಕಳವು

ಕಾಸರಗೋಡು: ಪೆರ್ಲ ಕೆಳಗಿನ ಪೇಟೆಯ ಬಜಕೂಡ್ಲು ರಸ್ತೆ ಸಮೀಪದ ಅಂಗಡಿಯೊಂದರಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು, ವ್ಯಾಪಾರಿಯೊಬ್ಬರು 7 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.

​ಅಂಗಡಿ ಮಾಲಕರು ಸ್ವಲ್ಪ ಸಮಯದ ಮಟ್ಟಿಗೆ ಪಕ್ಕದ ಅಂಗಡಿಗೆ ತೆರಳಿದ್ದನ್ನೇ ಕಾಯುತ್ತಿದ್ದ ಖದೀಮನೊಬ್ಬ ನುಗ್ಗಿ, ನಗದು ಡ್ರಾವರ್‌ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾನೆ. ಮಾಲಕರು ಮರಳಿ ಬಂದು ನೋಡಿದಾಗ ಹಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

​ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಪ್ಯಾಂಟ್ ಹಾಗೂ ಶರ್ಟ್ ಧರಿಸಿದ್ದ ವ್ಯಕ್ತಿ ಅಂಗಡಿಗೆ ನುಗ್ಗಿ ಮೇಜಿನಿಂದ ಹಣ ಎಗರಿಸುವ ದೃಶ್ಯ ಸ್ಪಷ್ಟವಾಗಿ ಕಂಡುಬಂದಿದೆ. ಘಟನೆ ಸಂಬಂಧ ಪರಿಶೀಲನೆ ಸಾಗಿದ್ದು, ಪೇಟೆಯಲ್ಲಿ ವರ್ತಕರ ಆತಂಕಕ್ಕೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!