ಮಲಬಾರ್, ಮಾವೇಲಿ ಎಕ್ಸ್‌ಪ್ರೆಸ್‌ಗೆ ಹೆಚ್ಚುವರಿ ಸ್ಲೀಪರ್ ಕೋಚ್: ಪ್ರಯಾಣಿಕರಿಗೆ ಗುಡ್‌ನ್ಯೂಸ್

ಕಾಸರಗೋಡು: ಕರಾವಳಿ ಹಾಗೂ ಮಲಬಾರ್ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಭಾರತೀಯ ರೈಲ್ವೇ, ರಾಜ್ಯದ ಪ್ರಮುಖ ರೈಲುಗಳಾದ ಮಲಬಾರ್ ಮತ್ತು ಮಾವೇಲಿ ಎಕ್ಸ್‌ಪ್ರೆಸ್‌ಗಳಿಗೆ ತಲಾ ಒಂದೊಂದು ಹೆಚ್ಚುವರಿ ಸ್ಲೀಪರ್ ಕೋಚ್‌ಗಳನ್ನು ಮಂಜೂರು ಮಾಡಿದೆ.

​ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಸಂಚರಿಸುವ ಮಾವೇಲಿ ಎಕ್ಸ್‌ಪ್ರೆಸ್ (16603) ಬುಧವಾರದಿಂದ ಹಾಗೂ ಮಂಗಳೂರು ಮಾವೇಲಿ ಎಕ್ಸ್‌ಪ್ರೆಸ್ (16604) ಇಂದಿನಿಂದ ಹೆಚ್ಚುವರಿ ಕೋಚ್‌ನೊಂದಿಗೆ ಸೇವೆ ನೀಡಲಿವೆ. ಇದರಿಂದಾಗಿ ಮಾವೇಲಿ ಎಕ್ಸ್‌ಪ್ರೆಸ್‌ನಲ್ಲಿ ಸ್ಲೀಪರ್ ಕೋಚ್‌ಗಳ ಸಂಖ್ಯೆ 10ಕ್ಕೇರಲಿದೆ.

​ಅದೇ ರೀತಿ, ಮಲಬಾರ್ ಎಕ್ಸ್‌ಪ್ರೆಸ್‌ಗೂ ಒಂದು ಹೆಚ್ಚುವರಿ ಕೋಚ್ ಸೇರ್ಪಡೆಯಾಗಿದ್ದು, ಇದರ ಸ್ಲೀಪರ್ ಕೋಚ್‌ಗಳ ಸಂಖ್ಯೆಯೂ 10ಕ್ಕೆ ಹೆಚ್ಚಳವಾಗಿದೆ. ಇದಲ್ಲದೆ ಚೆನ್ನೈ ಎಗ್‌ಮೋರ್-ಮಂಗಳೂರು ಎಕ್ಸ್‌ಪ್ರೆಸ್ ರೈಲಿಗೂ ತಲಾ ಒಂದೊಂದು ಕೋಚ್ ಮಂಜೂರಾಗಿದ್ದು, ಒಟ್ಟು ಕೋಚ್ ಸಂಖ್ಯೆ 12ಕ್ಕೇರಿದೆ.

ರಾಜಧಾನಿ ತಿರುವನಂತಪುರಕ್ಕೆ ಪ್ರತಿನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಈ ನಿರ್ಧಾರದಿಂದ ಹೆಚ್ಚಿನ ಅನುಕೂಲವಾಗಲಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!