ಮಂಜೇಶ್ವರ: ಕನಿಲ ಶ್ರೀ ಭಗವತಿ ಕ್ಷೇತ್ರದಲ್ಲಿ ನಡೆದ ಮಹಾಸಭೆಯಲ್ಲಿ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ರೋಹಿದಾಸ್ ಬಂಗೇರ (ಮುಂಬೈ)

ಹಾಗೂ ವಿಶ್ವನಾಥ್ ಕುದುರು ಆಯ್ಕೆಯಾದರು.

ಅಧ್ಯಕ್ಷರಾಗಿ ಗಣೇಶ್ ಪಾವೂರು,

ಉಪಾಧ್ಯಕ್ಷರಾಗಿ ಗಂಗಾಧರ ದುರ್ಗಿಪಳ್ಳ,

ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಕಡಪರ,

ಖಜಾಂಚಿಯಾಗಿ ಸುರೇಶ್ ಕುಮಾರ್ ಬಿ.ಎಂ.

ಹಾಗೂ ಜೊತೆ ಕಾರ್ಯದರ್ಶಿಯಾಗಿ ಉದಯ ಕುಮಾರ್ ಮಂಜೇಶ್ವರ

ಆಯ್ಕೆಯಾದರು.
ಸಭೆಯಲ್ಲಿ ಸೋಮಶೇಖರ್, ದೇವದಾಸ್ ವರ್ಕಾಡಿ, ವಿಜಯ ಕನಿಲ, ಲಕ್ಷ್ಮಣ ಸಾಲಿಯಾನ್, ನವೀನ್ ವಕೀಲರು ಹೊಸಂಗಡಿ, ದಯಾನಂದ ಬಜಾಲ್ ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.

ನೂತನ ಅಧ್ಯಕ್ಷ ಗಣೇಶ್ ಪಾವೂರು ಮಾತನಾಡಿ, ಶ್ರೀ ಭಗವತಿ ದೇವಿಯ ಆಶೀರ್ವಾದ ಕೋರಿ, ಸಮಾಜ ಬಾಂಧವರ ಸಹಕಾರವನ್ನು ಕೋರಿದರು. ದೇವದಾಸ್ ಸ್ವಾಗತಿಸಿದರು. ಲಕ್ಷ್ಮಣ ಸಾಲಿಯಾನ್ ವಂದಿಸಿದರು.

