ನೀಲೇಶ್ವರದಲ್ಲಿ ಹೋಟೆಲ್ ಮಾಲೀಕ ನೇಣು ಬಿಗಿದುಕೊಂಡು ಸಾವು

ಕಾಸರಗೋಡು: ನೀಲೇಶ್ವರದ ಪಟ್ಟೇನದಲ್ಲಿ ಹೋಟೆಲ್ ನಡೆಸುತ್ತಿದ್ದ ವೃದ್ಧರೊಬ್ಬರು ನೇಣು ಬಿಗಿದುಕೊಂಡು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಟ್ಟೇನ ವರಪ್ರಾತ್ ನಿವಾಸಿ ಕೃಷ್ಣನ್ ನಾಯರ್ (74) ಸಾವನ್ನಪ್ಪಿದ ದುರ್ದೈವಿ.

​ಇವರು ನೀಲೇಶ್ವರದ ಬ್ಲೋಕ್ ಕಚೇರಿಯ ಲಿಂಕ್ ರಸ್ತೆ ಬದಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ನೀಲೇಶ್ವರ ಪೊಲೀಸರು ಪರಿಶೀಲನೆ ನಡೆಸಿ ಮಹಜರು ಜರುಗಿಸಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!