ಬೋರ್‌ವೆಲ್ ಟ್ರ್ಯಾಕ್ಟರ್ ಮಗುಚಿ ಇಬ್ಬರು ಕಾರ್ಮಿಕರು ದುರಂತ ಸಾವು

​ಕಾಸರಗೋಡು : ಜಿಲ್ಲೆಯ ವೆಳ್ಳರಿಕುಂಡು ಸಮೀಪದ ಎಳೇರಿ ವರಕ್ಕಾಡ್ ಎಂಬಲ್ಲಿ ಶನಿವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಕೊಳವೆ ಬಾವಿ (ಬೋರ್‌ವೆಲ್) ಕೊರೆಯುವ ಟ್ರ್ಯಾಕ್ಟರ್ ಮಗುಚಿ ಬಿದ್ದು ಇಬ್ಬರು ವ್ಯಕ್ತಿಗಳು ದುರಂತವಾಗಿ ಸಾವನ್ನಪ್ಪಿದ್ದಾರೆ.ಮಧ್ಯಪ್ರದೇಶ ಮೂಲದ ದೇವೇಂದ್ರ ಮತ್ತು ಛತ್ತೀಸ್‌ಗಢ ಮೂಲದ ಮನಾಸರ್ ಮೃತಪಟ್ಟ ದುರದೃಷ್ಟಕರ ಕಾರ್ಮಿಕರು.

ಅಪಘಾತದ ಸಮಯದಲ್ಲಿ ಇವರಿಬ್ಬರೂ ವಾಹನದಲ್ಲಿದ್ದರು. ವರಕ್ಕಾಡ್ ಬ್ಯಾಂಕ್ ಸಮೀಪದ ಕಡಿದಾದ ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ, ಜೇಸನ್ ಎಂಬುವವರ ಕುಟುಂಬ ವಾಸವಿದ್ದ ಬಾಡಿಗೆ ಮನೆಯ ಮೇಲೆ ಮಗುಚಿ ಬಿದ್ದಿದೆ.

ದೊಡ್ಡ ಶಬ್ದ ಕೇಳಿ ಸ್ಥಳಕ್ಕೆ ಧಾವಿಸಿ ಬಂದ ಸ್ಥಳೀಯ ನಿವಾಸಿಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊರತೆಗೆದರು.ಆದರೆ ಅಷ್ಟರಲ್ಲಾಗಲೇ ಅವರಿಬ್ಬರೂ ಮೃತಪಟ್ಟಿದ್ದರು. ಮೃತದೇಹಗಳನ್ನು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕಡಿದಾದ ಜಾಗದಲ್ಲಿ ಈ ಹಿಂದೆ ಕೂಡ ನಾಲ್ಕು ದೊಡ್ಡ ಅಪಘಾತಗಳು ನಡೆದಿದ್ದವು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!