ಪೂವಮ್ಮ ಅವರಿಗೆ ಸಂಸದ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಅಭಿನಂದನೆ

ಜಪಾನ್‌ನ ನಾಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ 4×400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು, ಕರಾವಳಿಯ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸಿದ ತುಳುನಾಡಿನ ಹೆಮ್ಮೆಯ ಮಗಳಾದ ಎಂ. ಆರ್. ಪೂವಮ್ಮ ಅವರ ನಿವಾಸಕ್ಕೆ ಭೇಟಿ ನೀಡಿ ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಏಷ್ಯನ್ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ದೇಶದ ಬೇರೆ ರಾಜ್ಯಗಳಲ್ಲಿ ಯಾವ ರೀತಿಯ ಗೌರವ ಧನ ಸಹಿತ ಪ್ರೋತ್ಸಾಹ ನೀಡಲಾಗಿದೆಯೋ ಅದೇ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರವೂ ಸಹ ಕುಡ್ಲದ ಚಿನ್ನದ ಹುಡುಗಿಯನ್ನು ಗೌರವಿಸಬೇಕು, ಅಲ್ಲದೇ ಕ್ರೀಡಾ ಕೋಟಾದಡಿಯಲ್ಲಿ ಉನ್ನತ ಹುದ್ದೆ ನೀಡಬೇಕು. ಭವಿಷ್ಯದಲ್ಲಿ ಇವರಿಂದ ಇನ್ನೂ ಹೆಚ್ಚಿನ ಸಾಧನೆ ಮೂಡಿ ಬರಲಿ, ಆ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ರಮೇಶ್ ಹೆಗ್ಡೆ, ಲಲೇಶ್ ಕುಮಾರ್, ಪೂರ್ಣಿಮಾ ಎಂ, ನಿತಿನ್ ಕುಮಾರ್, ನಂದನ್ ಮಲ್ಯ, ರಾಜ್ ಗೋಪಾಲ್ ರೈ, ಪೂರ್ಣಿಮಾ ರಾವ್, ಉಮೇಶ್ ಶೆಟ್ಟಿ, ರವಿಚಂದ್ರ, ಪ್ರವೀಣ್ ನಿಡ್ಡೆಲ್, ಅರುಣ್ ಉರ್ವ, ದೀಪಕ್ ಡಿಸೋಜ ಸಹಿತ ಮಂಡಲದ ವಿವಿಧ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!