ಮಂಗಳೂರು: ಮಂಗಳೂರು ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ (MMSA) ವತಿಯಿಂದ ಭಾರತ್ ಪೆಟ್ರೋಲಿಯಂ ಆಟೋಕ್ರಾಸ್-2026 ಸ್ಪರ್ಧೆ ಅ.11ರಂದು ಕೂಳೂರಿನ ಗೋಲ್ಡ್ಫಿಂಚ್ ಸಿಟಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಧೀರ್ ಬಿ.ಕೆ. ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕೊಡಗು, ಮೂಡುಬಿದಿರೆ ಹಾಗೂ ಕೇರಳ ಸೇರಿದಂತೆ ವಿವಿಧೆಡೆಯಿಂದ ಸುಮಾರು 120 ಮಂದಿ ಚಾಲಕರು ಭಾಗವಹಿಸಲಿದ್ದಾರೆ. ಒಟ್ಟು 13 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಚಾಲಕರ ಕೌಶಲ್ಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಆಯೋಜನ ಸಮಿತಿಯ ಪ್ರಮುಖರಾದ ಅಶ್ವಿನ್ ನಾಯಕ್ ಮಾತನಾಡಿ, ಸುಮಾರು 1.1 ಕಿ.ಮೀ. ಉದ್ದದ ಟ್ರ್ಯಾಕ್ನಲ್ಲಿ ಹಲವು ತಿರುವುಗಳು ಹಾಗೂ ಸವಾಲಿನ ಮಾರ್ಗವನ್ನು ರೂಪಿಸಲಾಗಿದ್ದು, ಚಾಲಕರ ನೈಪುಣ್ಯಕ್ಕೆ ಪರೀಕ್ಷೆಯಾಗಲಿದೆ. ವೇಗದ ಮಹಿಳಾ ಚಾಲಕಿಗೆ ವಿಶೇಷ ‘ಲೇಡೀಸ್ ಟ್ರೋಫಿ’ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು ಎಫ್ಎಂಎಸ್ಸಿಐ (FMSCI)ಯಿಂದ ಅಗತ್ಯ ಪರವಾನಗಿ ಪಡೆಯಬೇಕು. ಒಂದು ದಿನದ ಪರವಾನಗಿಯೂ ಲಭ್ಯವಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಸ್ಪರ್ಧೆಯನ್ನು ವೀಕ್ಷಿಸಲು ಉಚಿತ ಪ್ರವೇಶವಿದ್ದು, ಬೆಳಗ್ಗೆ 9ರಿಂದ ಕಾರುಗಳ ಪ್ರದರ್ಶನಕ್ಕೂ ಅವಕಾಶವಿದೆ. ಪ್ರೇಕ್ಷಕರ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಯಾರೂ ರೇಸ್ ಟ್ರ್ಯಾಕ್ ಪ್ರವೇಶಿಸದೆ ನಿಗದಿತ ಸ್ಥಳದಲ್ಲೇ ಉಳಿಯಬೇಕು ಎಂದು ಮನವಿ ಮಾಡಿದರು.
ಬೆಳಗ್ಗೆ ಗಣ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸಚಿವ ಯು.ಟಿ. ಖಾದರ್ ಸೇರಿದಂತೆ ಸ್ಥಳೀಯ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಮಂಗಳೂರು, ಉಡುಪಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಯುವಕರು ಸಾರ್ವಜನಿಕ ರಸ್ತೆಯಲ್ಲಿ ವೇಗದ ಚಾಲನೆ ನಡೆಸುವ ಬದಲು ಇಂತಹ ನಿಯೋಜಿತ ಹಾಗೂ ಸುರಕ್ಷಿತ ಟ್ರ್ಯಾಕ್ನಲ್ಲಿ ತಮ್ಮ ಚಾಲನಾ ಕೌಶಲ್ಯ ಪ್ರದರ್ಶಿಸುವಂತೆ ಅಶ್ವಿನ್ ನಾಯಕ್ ಕರೆ ನೀಡಿದರು.

ಸ್ಪರ್ಧೆಯಲ್ಲಿ ವೇಗದ ಪುರುಷ ಚಾಲಕ, ವೇಗದ ಮಹಿಳಾ ಚಾಲಕಿ ಹಾಗೂ ಅತ್ಯುತ್ತಮ ಟ್ಯೂನರ್ ವಿಭಾಗಗಳಲ್ಲಿ ವಿಶೇಷ ಟ್ರೋಫಿಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ಸಂಘದ ಅಧ್ಯಕ್ಷ ಸುಧೀರ್ ಬಿ.ಕೆ. (ಮೊ. 98450 85827) ಅವರನ್ನು ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಆಯೋಜನ ಸಮಿತಿಯ ಪ್ರಮುಖರಾದ ವಿಕ್ರಂ ರಾವ್ ಹಾಗೂ ಹರೀಶ್ ಉಪಸ್ಥಿತರಿದ್ದರು.


The bonus system on xlxwinplataforma is quite generous compared to other sites I’ve used. It really helps when you are just starting out. Definitely worth checking out. xlxwinplataforma