ಪುತ್ತೂರು : AIKMCC ರಾಷ್ಟ್ರೀಯ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ M. K. ನೌಶಾದ್ ಅವರು ಸಂಪ್ಯ ಮೆಡ್ಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಕಾರ್ಯಚಟುವಟಿಕೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳು ಹಾಗೂ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಮೆಡ್ಲ್ಯಾಂಡ್ ಆಸ್ಪತ್ರೆಯ ಕಾರ್ಯಚಟುವಟಿಕೆಗಳು ಮತ್ತು ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ M. K. ನೌಶಾದ್ , AIKMCCಯ ಒಪ್ಪಮ್ ಸುರಕ್ಷಾ ಯೋಜನೆಯ ಉದ್ದೇಶ ಹಾಗೂ ಪ್ಯಾಲಿಯೇಟಿವ್ ಕೇರ್ ಸೇವೆಯ ಅಗತ್ಯತೆ ಮತ್ತು ಅದರ ಅನುಷ್ಠಾನದ ಮಹತ್ವವನ್ನು ವಿವರಿಸಿದರು.
ಸಮಾಜದ ಅಶಕ್ತರು, ದೀರ್ಘಕಾಲೀನ ಕಾಯಿಲೆಗಳಿಂದ ಬಳಲುತ್ತಿರುವವರು ಹಾಗೂ ಆರೈಕೆಯ ಅಗತ್ಯವಿರುವವರಿಗೆ ಪ್ಯಾಲಿಯೇಟಿವ್ ಕೇರ್ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಮೆಡ್ಲ್ಯಾಂಡ್ ಆಸ್ಪತ್ರೆಯ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಸ್ವಾಗತಿಸಿ ಮಾತನಾಡಿದ ಮೆಡ್ಲ್ಯಾಂಡ್ ಆಸ್ಪತ್ರೆಯ ಅಧ್ಯಕ್ಷ ಅಶ್ರಫ್ ಕಮ್ಮಾಡಿ, AIKMCC ಕೈಗೊಂಡಿರುವ ಸಾಮಾಜಿಕ ಹಾಗೂ ಆರೋಗ್ಯ ಸೇವಾ ಕಾರ್ಯಗಳಿಗೆ ಮೆಡ್ಲ್ಯಾಂಡ್ ಆಸ್ಪತ್ರೆಯಿಂದ ಸಾಧ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಕಾನೂನು ಸಲಹೆಗಾರ ಅಡ್ವೊಕೇಟ್ ಮೂಸಾ ಕುಂಚಿ ಪೈಂಬಚ್ಚಾಲ್ ಅವರು ಮೆಡ್ಲ್ಯಾಂಡ್ ಆಸ್ಪತ್ರೆಯ ಕಾರ್ಯಚಟುವಟಿಕೆಗಳು, ಸೇವೆಗಳು ಹಾಗೂ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮೆಡ್ಲ್ಯಾಂಡ್ ಆಸ್ಪತ್ರೆಯ ಮ್ಯಾಗಜಿನ್ ಬಿಡುಗಡೆ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ M. K. ನೌಶಾದ್ ಅವರನ್ನು, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ AIKMCC ರಾಷ್ಟ್ರೀಯ ಕೇಂದ್ರ ಸಮಿತಿಯ ಉಪಾಧ್ಯಕ್ಷ ನಾಸರ್ V. K., ಯಶವಂತಪುರ ಏರಿಯಾ ಸಮಿತಿ ಅಧ್ಯಕ್ಷ Arshad V. C., ಪ್ರಧಾನ ಕಾರ್ಯದರ್ಶಿ ಮಹಮೂದ್ K., ಖಜಾಂಚಿ ಫೈಸಲ್ , ದಕ್ಷಿಣ ಕನ್ನಡ AIKMCC ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲಿ ತಂಗಳ್ , ಮಧುರಾ ಗ್ರೂಪ್ ಹಾಗೂ AIKMCC ಪುತ್ತೂರು ಏರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಮಧುರ , ಜಿಲ್ಲಾ ಖಜಾಂಚಿ ಇಬ್ರಾಹಿಂ ಹಾಜಿ , ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಹನೀಫ್ ನಂದಿನಿ ಹಾಗೂ ಹನೀಫ್ ಮುಕ್ವೆ ಉಪಸ್ಥಿತರಿದ್ದರು.
ಅದೇ ರೀತಿ ಸುಳ್ಯ ಏರಿಯಾ ಸಮಿತಿ ಅಧ್ಯಕ್ಷ Er. ಖಲಂದರ್ ಎಲಿಮಲೆ , ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ , ಪುತ್ತೂರು ಏರಿಯಾ ಸಮಿತಿ ಅಧ್ಯಕ್ಷ ಅಬೂಬಕರ್ ನಸೀಬ್ , ಖಜಾಂಚಿ ಅಬ್ದುಲ್ ಅಝೀ mಝ್ ಹಾಜಿ , ವರ್ಕಿಂಗ್ ಸೆಕ್ರೆಟರಿ ಯೂಸುಫ್ ಸಾಲ್ಮರ , ಮಾಧ್ಯಮ ಕಾರ್ಯದರ್ಶಿ ರಫೀಕ್ ಬೆಟ್ಟoಪಾಡಿ , ಸಮಿತಿ ಸದಸ್ಯರಾದ ಹನೀಫ್ ಹಾಜಿ ಉದಯ , AG ಯೂಸುಫ್ , ನಿಜಾಮ್ ಮುಕ್ವೆ , C. K. ಹಸೈನಾರ್ , ಪೈಚರ್ ಹಮೀದ್ , ಝುಬೈರ್ MD, ಸಿರಾಜ್ C. K., ಸಿನ್ಸಾರ್ ಮುರ ಹಾಗೂ ಪತ್ರಕರ್ತರಾದ ಶೇಖ್ ಜೈನುದ್ದೀನ್ ಮತ್ತು ಯೂಸುಫ್ ರೆಂಜಲಾಡಿ ಭಾಗವಹಿಸಿದ್ದರು.


I had a great run today and won a decent amount. The withdrawal process was surprisingly quick and hassle free. Cheers to pk9999win