ದಿನಾಂಕ 11.06.2026ರಂದು 5ನೇ ವರ್ಷದ ಮಂಗಳೂರು ವಿಭಾಗದ ದಸರಾ ದರ್ಶನ ವಿಶೇಷ ಟೂರ್ ಪ್ಯಾಕೇಜ್ ಅನ್ನು ಪ್ರಾರಂಭಿಸಲಾಗುವುದು .
ಸದರಿ ಟೂರ್ ಪ್ಯಾಕೇಜ್ ನ ವಿವರ

- ಮಂಗಳೂರು ಪ್ಯಾಕೇಜ್. ಈ ಪ್ಯಾಕೇಜ್ ನಲ್ಲಿ ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರು ಮಾರಿಯಮ್ಮ, ಶ್ರೀ ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ, ಸಸಿ ಹಿತ್ಲು ಶ್ರೀ ಭಗವತಿ, ಚಿತ್ತಾಪುರದ ಶ್ರೀ ದುರ್ಗಾಪರಮೇಶ್ವರಿ, ಊರ್ವ ಮಾರಿಯಮ್ಮ ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ದೇವರ ದರ್ಶನ .
- ಶೃಂಗೇರಿ ಪ್ಯಾಕೇಜ್. ಈ ಪ್ಯಾಕೇಜ್ ನಲ್ಲಿ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ,ಶೃಂಗೇರಿ ಶಾರದಾಂಬೆ, ಹರಿಹರಪುರ ಮಠ ಹಾಗೂ ಋಷ್ಯಶೃಂಗ ಸ್ವಾಮಿ ದರ್ಶನ.
- ಮಡಿಕೇರಿ ಪ್ಯಾಕೇಜ್ ಈ ಪ್ಯಾಕೇಜ್ ನಲ್ಲಿ ಭಾಗಮಂಡಲದ ಭಗಂಡೇಶ್ವರ ದೇವಾಲಯ, ತಲಕಾವೇರಿ, ಅಬ್ಬಿ ಫಾಲ್ಸ್, ರಾಜ ಸೀಟ್ ಹಾಗೂ ಪುತ್ತೂರು ಮಾಲಿಂಗೇಶ್ವರ ಸ್ವಾಮಿ ದರ್ಶನ.
- ಕೊಲ್ಲೂರು ಪ್ಯಾಕೇಜ್ , ಈ ಪ್ಯಾಕೇಜ್ ನಲ್ಲಿ ಉಚ್ಚಿಲ ಮಹಾಲಕ್ಷ್ಮಿ ,ಕಾಪು ಮಾರಿಗುಡಿ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ ಹಾಗೂ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದರ್ಶನ.
- ಸಿಗಂದೂರು ಪ್ಯಾಕೇಜ್ ಈ ಪ್ಯಾಕೇಜ್ ನಲ್ಲಿ ಸಿಗಂದೂರು ಚೌಡೇಶ್ವರಿ ಕೊಲ್ಲೂರು ಮೂಕಾಂಬಿಕೆ ದರ್ಶನ.
ಈ ದಸರಾ ದರ್ಶನ ಟೂರ್ ಪ್ಯಾಕೇಜ್ ಅನ್ನು ಮಂಗಳೂರು ಬಸ್ ನಿಲ್ದಾಣದ ಗಣಪತಿ ದೇವಸ್ಥಾನದ ಬಳಿ ದಿನಾಂಕ 11.10.26ರ ಮುಂಜಾನೆ 06.30 ಕೆ ಯಾತ್ರಾರ್ಥಿ ಗಳು ಹಾಗೂ ಕೆಎಸ್ಆರ್ ಟಿಸಿ ಯ ಅಧಿಕಾರಿಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಪೂಜೆ ಸಲ್ಲಿಸುವುದರ ಮೂಲಕ ಆರಂಭಿಸಲಾಗುವುದು.

ಈ ಶುಭ ಸಮಯದಲ್ಲಿ ದೃಶ್ಯ ಮಾಧ್ಯಮದ ಹಾಗೂ ಪ್ರಿಂಟ್ ಮೀಡಿಯಾದ ಎಲ್ಲಾ ಪತ್ರಕರ್ತ ಬಂಧುಗಳು ಆಗಮಿಸಿ, ದಸರಾ ದರ್ಶನ ವಿಶೇಷ ಪ್ಯಾಕೇಜ್ ಅನ್ನು ಯಶಸ್ವಿ ಗೊಳಿಸಿ ಕೊಡಬೇಕಾಗಿ ಕೋರಲಾಗಿದೆ.
ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹಾಗೂ ಅಧಿಕಾರಿ ವೃಂದ
ಕರಾರಸಾ ನಿಗಮ ಮಂಗಳೂರು

