
ಕಾಸರಗೋಡು: ದೆಹಲಿಯಲ್ಲಿ ಸಿಪಿಐಎಂ ನಾಯಕರ ಬಂಧನ ಖಂಡಿಸಿ ಕಾಸರಗೋಡು ನಗರದಲ್ಲಿ ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್, ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯಂತಹ ದಮನಕಾರಿ ಆಳ್ವಿಕೆ ನಡೆಸುತ್ತಿದೆ ಎಂದು ಆಪಾದಿಸಿದರು.

ಅಮಿತ್ ಶಾ ಹಾಗೂ ನರೇಂದ್ರ ಮೋದಿ ಜೋಡಿಯು ದೇಶವನ್ನು ಹಿಂಸಾಚಾರದತ್ತ ನೂಕುತ್ತಿದ್ದು, ಹೋರಾಟವನ್ನು ಹತ್ತಿಕ್ಕಿದರೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳಲಿವೆ ಎಂದು ಎಚ್ಚರಿಸಿದರು.ಮುಖಂಡರಾದ ಟಿ.ಎಂ.ಎ. ಕರೀಂ, ಎಂ. ರಾಜಗೋಪಾಲನ್ ಸೇರಿದಂತೆ ಹಲವರು ನೇತೃತ್ವ ನೀಡಿದರು.ದೆಹಲಿಯಲ್ಲಿ ಹಿರಿಯ ನಾಯಕರ ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

