ದೆಹಲಿಯಲ್ಲಿ ಸಿಪಿಐಎಂ ನಾಯಕರ ಬಂಧನ ಖಂಡಿಸಿ ಕಾಸರಗೋಡಿನಲ್ಲಿ ಪ್ರತಿಭಟನೆ

​

ಕಾಸರಗೋಡು: ದೆಹಲಿಯಲ್ಲಿ ಸಿಪಿಐಎಂ ನಾಯಕರ ಬಂಧನ ಖಂಡಿಸಿ ಕಾಸರಗೋಡು ನಗರದಲ್ಲಿ ಸಿಪಿಐಎಂ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಸೆಕ್ರೇಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್, ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿಯಂತಹ ದಮನಕಾರಿ ಆಳ್ವಿಕೆ ನಡೆಸುತ್ತಿದೆ ಎಂದು ಆಪಾದಿಸಿದರು.

​ಅಮಿತ್ ಶಾ ಹಾಗೂ ನರೇಂದ್ರ ಮೋದಿ ಜೋಡಿಯು ದೇಶವನ್ನು ಹಿಂಸಾಚಾರದತ್ತ ನೂಕುತ್ತಿದ್ದು, ಹೋರಾಟವನ್ನು ಹತ್ತಿಕ್ಕಿದರೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳಲಿವೆ ಎಂದು ಎಚ್ಚರಿಸಿದರು.ಮುಖಂಡರಾದ ಟಿ.ಎಂ.ಎ. ಕರೀಂ, ಎಂ. ರಾಜಗೋಪಾಲನ್ ಸೇರಿದಂತೆ ಹಲವರು ನೇತೃತ್ವ ನೀಡಿದರು.ದೆಹಲಿಯಲ್ಲಿ ಹಿರಿಯ ನಾಯಕರ ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!