20 ಕ್ರಿಮಿನಲ್ ಪ್ರಕರಣಗಳ ಆರೋಪಿ ‘ಮೀಸೆ ರೌಫ್’ ಮುಂಬಯಿಯಲ್ಲಿ ಬಂಧನ

ಕಾಸರಗೋಡು : ಗ್ಯಾರೇಜ್‌ಗೆ ಬೆಂಕಿ ಇಟ್ಟದ್ದು, ಖಡ್ಗ ಬೀಸಿ ಭಯ ಸೃಷ್ಟಿಸಿದ್ದು ಹಾಗೂ ಸಾರ್ವಜನಿಕರಿಗೆ ಇರಿದು ಗಾಯಗೊಳಿಸಿದ ಪ್ರಕರಣ ಸೇರಿದಂತೆ ಸುಮಾರು 20 ಕ್ರಿಮಿನಲ್ ಕೇಸುಗಳ ಆರೋಪಿಯಾದ ಕುಖ್ಯಾತ ರೌಡಿ ‘ಮೀಸೆ ರೌಫ್’ ಯಾನೆ ಉಪ್ಪಳ ಮೂಲದ ರೌಫ್ (40) ಎಂಬಾತನನ್ನು ಮುಂಬಯಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

​ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠರ ವಿಶೇಷ ತನಿಖಾ ದಳ ಮತ್ತು ಕುಂಬಳೆ ಠಾಣಾ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಯಶಸ್ಸು ಸಿಕ್ಕಿದೆ.

ನೂರಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಹಾಗೂ ಸೈಬರ್ ಸೆಲ್ ಸಹಾಯದಿಂದ ಈತನ ಸುಳಿವು ಪತ್ತೆಹಚ್ಚಿ ಮುಂಬಯಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಕಾಸರಗೋಡಿಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

2 thoughts on “20 ಕ್ರಿಮಿನಲ್ ಪ್ರಕರಣಗಳ ಆರೋಪಿ ‘ಮೀಸೆ ರೌಫ್’ ಮುಂಬಯಿಯಲ್ಲಿ ಬಂಧನ”

Leave a Reply

Your email address will not be published. Required fields are marked *

error: Content is protected !!