ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ವಿಶ್ವಕಾರ್ಮಿಕರ ದಿನ ಮೇ ದಿನಾಚರಣೆ

ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ವಿಶ್ವಕಾರ್ಮಿಕರ ದಿನ ಮೇ ದಿನಾಚರಣೆ ನಡೆಸಲಾಯಿತು ಅಂಗಡಿ ಪಡವಿನಿಂದ ಹೊಸಂಗಡಿ ವರೆಗೆ ಜಾತ ನಡೆಸಲಾಗಿದ್ದು ಕಾರ್ಯಕ್ರಮ ವನ್ನು bkm ರಾಜ್ಯ ಕಾರ್ಯದರ್ಶಿ adv ಗೋವಿಂದನ್ ಪಲ್ಲಿಕಾಫಿಲ್ ಉದ್ಘಾಟಿಸಿ ಮಾತನಾಡಿದರು

ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಕಾರ್ಮಿಕರು ಹೋರಾಟ ದಿಂದ ಪಡೆದು ಕೊಂಡ 8 ಗಂಟೆ ಕೆಲಸ 8 ಗಂಟೆ ವಿನೋದ 8 ಗಂಟೆ ವಿಶ್ರಮ ಹಕ್ಕುಗಳನ್ನು ಇಲ್ಲದಾಗಿಸಿ 12 ಗಂಟೆ ದುಡಿಮೆ ಎಂಬ ನೀತಿಯನ್ನು ಜಾರಿಗೆ ತರಲು ಶ್ರಮಿಸುತ್ತಿದೆ ಕಾರ್ಮಿಕರು ಮಾತ್ರವಲ್ಲದೆ ದೇಶದ ರೈತರು ಕೇಂದ್ರ ಸರ್ಕಾರದ ನೀತಿಗೆ ಎದುರಾಗಿ ಐತಿಹಾಸಿಕ ಹೋರಾಟ ನಡೆಸಿದ್ದು ದೇಶದಾದ್ಯಂತ ಸಂಚಲನ ಮೂಡಿಸಿದೆ

ಯುವಕರು ಮೋದಿ ಕೊಟ್ಟ ಭರವಸೆ ವರ್ಷಕ್ಕೆ 2 ಕೋಟಿ ಉದ್ಯೋಗ ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು citu ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದರು citu ಜಿಲ್ಲಾ ಖಜಾಂಜಿ ತಂಬಾನ್ ನಾಯರ್ ಮೇ 20 ರಂದು ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ನಡೆಯುವ ದೇಶೀಯ ಮುಸ್ಕರ ಯಶಸ್ವಿ ಗೊಳಿಸಲು ಪ್ರತಿ ವಲಯದಲ್ಲಿ ದುಡಿಯುವ ಜನರು ಮುಂದೆ ಬರಬೇಕೆಂದು ದೇಶದ ಕಾರ್ಮಿಕರ ಒಗ್ಗಟ್ಟು ಮುರಿಯಲು ಬಿಜೆಪಿ ದೇಶದಲ್ಲಿ ಜನರನ್ನು ಧರ್ಮದ ಅದಾರ ದಲ್ಲಿ ವಿಭಜಿಸಲು ಪ್ರಯತ್ನ ಮಾಡುತ್ತಿದ್ದು ಬಿಜೆಪಿ ಈ ಕುತಂತ್ರ ಎಲ್ಲಾ ಕಾಲದಲ್ಲೂ ಯಶಸ್ವಿ ಅಗಳು ಸಾಧ್ಯವಿಲ್ಲ ಎಂಬುದನ್ನು ಕಾರ್ಮಿಕರು ಅರ್ಥಮಾಡಿ ಕೊಂಡು ರಾಜಕೀಯ ಪ್ರಬುದ್ಧರಾಗ ಬೇಕೆಂದು ಕರೆ ನೀಡಿದರು ಕಾರ್ಯಕ್ರಮದಲ್ಲಿ citu ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ aituc ಮಂಜೇಶ್ವರ ಮಂಡಲ ಅಧ್ಯಕ್ಷ ರಾದ ರಾಮಚಂದ್ರ ಬಡಾಜೆ, aituc ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫಾ ಕಡಂಬಾರ್ citu ಮಂಜೇಶ್ವರ ಏರಿಯಾ ಅಧ್ಯಕ್ಷ ರಾದ ಡಿ ಕಮಲಾಕ್ಷ ಮೊದಲಾದವರು ಉಪಸ್ಥಿತರಿದ್ದರು ಆರಂಭದಲ್ಲಿ aituc ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಸ್ವಾಗತಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!