ಮಂಜೇಶ್ವರ: ಪೈವಳಿಕೆ ಭಾಗದಲ್ಲಿ ಬಸ್‌ಗಳಿಲ್ಲದೆ ಜನರ ಪರದಾಟ

ಮಂಜೇಶ್ವರ : ಪೈವಳಿಕೆ, ಚಿಪ್ಪಾರು, ಕುರುಡಪದವು, ಖಂಡಿಗೆ, ಸುಂಕದಕಟ್ಟೆ ಹಾಗೂ ಗೋಳಿಕಟ್ಟೆ ಪ್ರದೇಶಗಳಲ್ಲಿ ಬಸ್ ಸೌಲಭ್ಯದ ತೀವ್ರ ಕೊರತೆಯಿಂದಾಗಿ ಜನರು ದಿನನಿತ್ಯ ಪರದಾಡುವಂತಾಗಿದೆ.

ವಿಟ್ಲ-ಬೇಡಗುಡ್ಡೆ-ಉಪ್ಪಳ-ಕುರುಡಪದವು ಮಾರ್ಗದಲ್ಲಿ ಸರಿಯಾದ ಬಸ್ ಸಂಚಾರವಿಲ್ಲದೆ ಸ್ಥಳೀಯರ ಪ್ರಯಾಣಕ್ಕೆ ಕಷ್ಟಸಾಧ್ಯವಾಗಿದೆ. ವಿಟ್ಲದಿಂದ ಬರುವ ಬಸ್‌ಗಳು ಕೆಲವೊಮ್ಮೆ ಲಾಲ್‌ಭಾಗ್‌ಗೆ ಟ್ರಿಪ್ ಮೊಟಕುಗೊಳಿಸುತ್ತಿವೆ.

​ಬೆಳಿಗ್ಗೆ ಬೇಡಗುಡ್ಡೆಯಿಂದ ವಿಟ್ಲಕ್ಕೆ ತೆರಳುವ ಬಸ್, ರಾತ್ರಿಯಷ್ಟೇ ಹಿಂತಿರುಗುತ್ತಿದ್ದು, ಉಪ್ಪಳದಿಂದ ಬರುವ ಬಸ್‌ಗಳು ಕುರುಡಪದವುವರೆಗೆ ತಲುಪುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ.

ಇದರಿಂದ ಸಾರ್ವಜನಿಕರು ಅಗತ್ಯ ಕೆಲಸಗಳಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ. ಜೊತೆಗೆ, ಈ ಮಾರ್ಗದ ಸ್ಟೇಜ್ ವ್ಯವಸ್ಥೆ ಸರಿಯಿಲ್ಲದೆ ಹೆಚ್ಚಿನ ದರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

SHARE
Loading spinner

2 thoughts on “ಮಂಜೇಶ್ವರ: ಪೈವಳಿಕೆ ಭಾಗದಲ್ಲಿ ಬಸ್‌ಗಳಿಲ್ಲದೆ ಜನರ ಪರದಾಟ”

Leave a Reply

Your email address will not be published. Required fields are marked *

error: Content is protected !!