ಉಪಜಿಲ್ಲಾ ಅಥ್ಲೆಟಿಕ್ ಮೀಟ್‌ನಲ್ಲಿ ಶ್ರೀವಾಣಿ ವಿಜಯ ಶಾಲೆಯ ಸಾಧನೆ; ವಿಜಯೋತ್ಸವ ಜಾಥಾ

ಮಂಜೇಶ್ವರ: ಉಪಜಿಲ್ಲಾ ಮಟ್ಟದ ಅಥ್ಲೆಟಿಕ್ ಮೀಟ್‌ನಲ್ಲಿ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.ಸಬ್ ಜೂನಿಯರ್, ಜೂನಿಯರ್, ಸೀನಿಯರ್ ಹಾಗೂ ಸಮಗ್ರ ವಿಭಾಗಗಳಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಯ ಸಂಭ್ರಮಕ್ಕಾಗಿ ಶಾಲೆಯಲ್ಲಿ ಬ್ಯಾಂಡ್ ವಾದ್ಯಗಳೊಂದಿಗೆ ವಿಜಯೋತ್ಸವ ಜಾಥಾ ನಡೆಸಲಾಯಿತು. ಜಾಥದಲ್ಲಿ ಶಾಲಾ ಪ್ರಾಂಶುಪಾಲ ವಿಜಯಕುಮಾರ್, ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ., ಅಧ್ಯಾಪಕ–ಅಧ್ಯಾಪಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಉಪಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ತೋರಿದ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿ, ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.

SHARE
Loading spinner

One thought on “ಉಪಜಿಲ್ಲಾ ಅಥ್ಲೆಟಿಕ್ ಮೀಟ್‌ನಲ್ಲಿ ಶ್ರೀವಾಣಿ ವಿಜಯ ಶಾಲೆಯ ಸಾಧನೆ; ವಿಜಯೋತ್ಸವ ಜಾಥಾ”

Leave a Reply

Your email address will not be published. Required fields are marked *

error: Content is protected !!