ಅ.18ರಂದು ಕುವರಿ ಪೂಜೆ, ಸಾಮೂಹಿಕ ದುರ್ಗಾ ನಮಸ್ಕಾರ

ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ಅ.18ರಂದು ನವರಾತ್ರಿ ಪ್ರಯುಕ್ತ ಕುವರಿ ಪೂಜೆ, ಸಾಮೂಹಿಕ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮೀ ಅಷ್ಟಕಂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಅಧ್ಯಕ್ಷ ರವೀಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಡಿಯಲ್ ಬೈಲ್‌ನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಎಂಟು ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಕುವರಿ ಪೂಜೆ ನಡೆಯಲಿದೆ. ಶಾರದಾ ವಿದ್ಯಾಲಯದ ಆವರಣದಲ್ಲಿ ಬೆಳಗ್ಗೆ 5ರಿಂದ 6.30ರವರೆಗೆ ಸಾಮೂಹಿಕ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮೀ ಅಷ್ಟಕಂ ನೆರವೇರಲಿದೆ ಎಂದರು.

ಮಂಗಳೂರು ಹಾಗೂ ಸುತ್ತಮುತ್ತಲಿನ ಭಕ್ತರಿಗೆ ಅನುಕೂಲವಾಗುವಂತೆ ನವರಾತ್ರಿಯ ವಿವಿಧ ದಿನಗಳಲ್ಲಿ ನಗರದ ಪೊಲೀಸ್ ಲೇನ್‌ನ ಶ್ರೀ ದೇವಿ ದೇವಸ್ಥಾನ, ಮುಗೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಅಡ್ಯಾರ್ ಪದವಿನ ಚಂಡಿಕಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ವಿಟ್ಲದ ಶ್ರೀ ಭಗವತಿ ಕ್ಷೇತ್ರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೆಲ್ಯಾಡಿ, ಕೌಕ್ರಾಡಿ, ಕೊಕ್ಕಡ, ಕಡಬ ಹಾಗೂ ಶರವೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಯೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆನಂದ ಕುಂಟಿನಿ, ಪ್ರಕಾಶ್ ನಾಯಕ್ ಕಂಕನಾಡಿ ಹಾಗೂ ಉಮೇಶ್ ಆಚಾರ್ಯ ಕದ್ರಿ ಉಪಸ್ಥಿತರಿದ್ದರು.

SHARE
Loading spinner

One thought on “ಅ.18ರಂದು ಕುವರಿ ಪೂಜೆ, ಸಾಮೂಹಿಕ ದುರ್ಗಾ ನಮಸ್ಕಾರ”

Leave a Reply

Your email address will not be published. Required fields are marked *

error: Content is protected !!