ಕಡಬ: ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ದ ಬೃಹತ್ ಸಹಿ ಸಂಗ್ರಹ

​ಕಡಬ (ದಕ್ಷಿಣ ಕನ್ನಡ): ಗೋ ಸಂರಕ್ಷಣೆ ಹಾಗೂ ಜಾಗೃತಿಯ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಗೋಸಮ್ಮಾನ್ ಆಹ್ವಾನ ಅಭಿಯಾನ’ಕ್ಕೆ ಕಡಬದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಅಭಿಯಾನದ ಅಂಗವಾಗಿ ಕಡಬ ತಾಲೂಕಿನ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಆವರಣದಲ್ಲಿ ಬೃಹತ್ ಸಹಿ ಸಂಗ್ರಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.


​ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿ ಗೋಮಾತೆಯ ಸಂರಕ್ಷಣೆಯ ಪರವಾಗಿ ಧ್ವನಿಗೂಡಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕಡಬ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ರಾವ್ ಮಂಕುಡೆ, ವಿ.ಎಚ್.ಪಿ ಜಿಲ್ಲಾ ಸಂಯೋಜಕ ಪ್ರಮೋದ್ ಕಡಬ, ಗೋ ಸೇವಾ ಜಿಲ್ಲಾ ಸಂಯೋಜಕ ನಿರಂಜನ್ ಕುಂತೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೋಸಮ್ಮಾನ್ ಆಹ್ವಾನ ಅಭಿಯಾನದ ಸಹ ಪ್ರಭಾರಿ ಅಶೋಕ ಇಳಂತಿಲ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
​ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರಾದ ಶ್ರೀಕೃಷ್ಣ ಎಂ.ಆರ್., ಅಶೋಕ್ ಕುಮಾರ್ ಪಿ. ಕಡಬ, ವಿಶ್ವನಾಥ ರೈ, ಸೀತಾರಾಮ, ಗುರುಕೃಪ, ಅಜಿತ್ ಆರ್ತಿಲ, ಸುಕೇಶ್ ಹಳೆಸ್ಟೇಷನ್ ಹಾಗೂ ಗೋ ಸಮ್ಮಾನ್ ಅಭಿಯಾನದ ತಾಲೂಕು ಸಮಿತಿಯ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.


​

SHARE
Loading spinner

Leave a Reply

Your email address will not be published. Required fields are marked *

error: Content is protected !!