ವಿಪ್ರ ಶಕ್ತಿ ಸದಾ ಮಿನುಗುತ್ತಿರುತ್ತದೆ:” ವಿದ್ವಾನ್ ಭಾಸ್ಕರ ಭಟ್, ಪಂಜ

ಸಮಾಜದ ಒಗ್ಗೂಡುವಿಕೆಗೆ ಬ್ರಾಹ್ಮಣರು ಸದಾ ಪ್ರಯತ್ನಿಸುತ್ತಾರೆ. ಧಿಯೋ ಯೋನ ಪ್ರಚೋದಯಾತ್ ಇದು ನಮ್ಮ ಪ್ರತಿಭಾ ಶಕ್ತಿಯ ಬೀಜ ಮಂತ್ರ. ಯಾವುದೇ ಮಾನವೀಯ ಬೇಧ ಕಲ್ಪಿಸದೆ ಸರ್ವರನ್ನೂ ತಮ್ಮೊಂದಿಗೆ ಕರೆದೊಯ್ಯುವ ಶಕ್ತಿ ಬ್ರಹ್ಮತ್ವಕ್ಕಿದೆ. ನಾವು ನಮ್ಮ ಧಾರ್ಮಿಕ ವಿಧಾನ, ಆಚರಣೆಯಿಂದ ನಮ್ಮ ಬಲ ವೃದ್ಧಿಸಿಕೊಳ್ಳುತ್ತೇವೆ. ಪುರದ ಹಿತವನ್ನು ಹಾರೈಸುವವರಾಗಿ ಸರ್ವಪ್ರಿಯರಾಗುತ್ತೇವೆ. ಲೋಕ ಕಲ್ಯಾಣವನ್ನೇ ಅಸ್ತ್ರವನ್ನಾಗಿಸಿಕೊಂಡು ಬದುಕುತ್ತೇವೆ. ಇದುವೇ ಬ್ರಹ್ಮ ತೇಜೋ ಬಲಂ ಬಲಮ್ ಆಗಿರುತ್ತದೆ.” ಎಂದು ಪ್ರಖರ ಧಾರ್ಮಿಕ ಚಿಂತಕರೂ,ವಿದ್ವಾಂಸರೂ ಆದ ಪಂಜ ಭಾಸ್ಕರ ಭಟ್ ರವರು ಕೋಡಿಕಲ್ ಬೆನಕ ಜ್ಯೋತಿ ಷ್ಯಾಲಯದಲ್ಲಿ ನಡೆದ ದಶಮ ವರ್ಷದ ಸರಣಿಯ ಸಮಾರೋಪ ಸಮಾರಂಭದ ಉದ್ಘಾಟನೆ ಮಾಡುತ್ತಾ ಕರೆ ನೀಡಿದರು.


ಧಾರ್ಮಿಕ ಚಿಂತಕ ಪ್ರೊ| ಎಂ.ಬಿ. ಪುರಾಣಿಕ್ ಮಾತನಾಡುತ್ತಾ” ಧರ್ಮದ ನಡೆಯೊಂದಿಗೆ ನಮ್ಮ ತನವನ್ನು ಬಿಗಿಗೊಳಿಸುತ್ತಾ ಸಾಗುವ ಹಿಂದೂ ಧರ್ಮದ ಪ್ರಮುಖ ವಿಭಾಗವೇ ನಾವು. ಹತ್ತು ವರ್ಷಗಳ ಸುದೀರ್ಘ ಪಯಣವನ್ನು ನಡೆಸಿದ ಈ ವಿಪ್ರ ವೇದಿಕೆ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದುವರಿಯಲಿ” ಎಂದು ಧರ್ಮ ಸಭೆಯಲ್ಲಿ ಹೇಳಿದರು.


ಡಿ.ರಮೇಶ ತಂತ್ರಿ, ವೈ. ಕೇಶವ ಭಟ್, ಮಂಗಳಾದೇವಿಯ ಮೊಕ್ತೇಸರರಾದ ಶ್ರೀ ಅರುಗ್ ಐತಾಳ, ವೇ.ಮೂ. ವಿಶ್ವಕುಮಾರ್ ಜೋಯಿಸ್, ಅನೂಪ್ ಕುಮಾರ್, ಬಾಗ್ಲೋಡಿ, ಸಂಪತ್ ಕುಮಾರ್ ಭದ್ಅತಿಥಿಗಳಾಗಿದ್ದರು. ಕು.ಸಂಜನಾ ದಾಸ್ ಪ್ರಾರ್ಥಿಸಿದರು.ಶ್ರೀ ನರಸಿಂಹ ಕುಲಕರ್ಣಿ” ವಂದೇ ಮಾತರಂ” ಗೀತೆಯನ್ನು ಹಾಡಿದರು.

ವಿಪ್ರ ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯ ಸ್ವಾಗತ – ಪ್ರಸ್ತಾವನೆ ನಡೆಸಿಕೊಟ್ಟರು ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್, ಕಟೀಲ್ ವರದಿ ವಾಚನಮಾಡಿದರು. ಟ್ರಸ್ಟಿಗಳಾದ ಪ್ರಭಾವತಿ ಮಡಿ, ವಿದ್ಯಾ ಗಣೇಶ್ ರಾವ್ ನಿರೂಪಿಸಿದ
ರು. ನಿಧೀಶ್ ಅಲೆವೂರಾಯ ಗಣಪತಿ ಅರ್ಥವ ೯ ಶೀರ್ಷವನ್ನು ಪಠಿಸಿದರು. ಟ್ರಸ್ಟಿ ಶ್ರೀಧರ ಹೊಳ್ಳ, ಖಚಾಂಚಿ ಶ್ರೀ ಕಿಶೋರ್ ಕೃಷ್ಣ ಧನ್ಯವಾದವಿತ್ತರು.

SHARE
Loading spinner

Leave a Reply

Your email address will not be published. Required fields are marked *

error: Content is protected !!